ಎಚ್ಚರ…..! ಇದು ʼಥೈರಾಯ್ಡ್ʼ ಲಕ್ಷಣ ಇರಬಹುದು

ವಯಸ್ಸು ನಲ್ವತ್ತರ ಗಡಿ ದಾಟುತ್ತಿದ್ದಂತೆ ಮಹಿಳೆಯರಲ್ಲಿ ಹೆಚ್ಚಾಗಿ ಥೈರಾಯ್ಡ್ ಸಮಸ್ಯೆ ಕಂಡು ಬರುತ್ತದೆ. ಈ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಇದು ದೇಹದ ಹಲವು ಭಾಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಥೈರಾಯ್ಡ್ ಹೆಚ್ಚಿದರೂ ಕಡಿಮೆಯಿದ್ದರೂ ಸಮಸ್ಯೆ ಉಂಟು ಮಾಡುವ ಸಾಧ್ಯತೆಗಳೇ ಹೆಚ್ಚು. ಅದರ ಲಕ್ಷಣಗಳು ನಿಮಗೆ ಸ್ಪಷ್ಟವಾಗಿ ಹೀಗೆ ಗೋಚರಿಸುತ್ತವೆ. ನಲ್ವತ್ತು ದಾಟಿದ ಬಳಿಕ ದಿಢೀರ್ ದೇಹ ತೂಕ ಹೆಚ್ಚುವುದು ಅಥವಾ ಕಡಿಮೆಯಾಗುವುದು ಥೈರಾಯ್ಡ್ ನ ಲಕ್ಷಣ. ಹೀಗಾದಾಗ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.

ತ್ವಚೆ ವಿಪರೀತ ಒಣಗಿ ಅಲ್ಲಲ್ಲಿ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಮೈ ಸಾಕಷ್ಟು ಅಥವಾ ಹೆಚ್ಚೇ ಬೆವರುತ್ತದೆ. ಬಿಸಿ ಅಥವಾ ತಾಪವನ್ನು ತಡೆಯುವ ಶಕ್ತಿ ಸಂಪೂರ್ಣವಾಗಿ ನಾಶವಾಗುತ್ತದೆ. ಕೆಲವೊಮ್ಮೆ ನೀರಾದ ಬೇಧಿಯೂ ಕಾಣಿಸಿಕೊಳ್ಳಬಹುದು.

ಕೆಲವರಿಗೆ ವಿಪರೀತ ಹಸಿವು ಕಾಡಿ, ವಿಪರೀತ ಸುಸ್ತು, ನಿದ್ರೆಯ ಸಮಸ್ಯೆಗಳೂ ಕಾಣಿಸಿಕೊಳ್ಳುವುದುಂಟು. ಇವೆಲ್ಲವೂ ಥೈರಾಯ್ಡ್ ನ ಲಕ್ಷಣಗಳಿರಬಹುದು. ಹಾಗಾಗಿ ಮೊದಲು ವೈದ್ಯರನ್ನು ಸಂಪರ್ಕಿಸಿ ಅವರು ಕೊಡುವ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಯಾವ ಸಮಸ್ಯೆಯೂ ಕಾಡದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read