HomeLatest Newsಎಚ್ಚರ.! ಮಾಯಾಂಗನೆ ಮೋಸದ ಜಾಲಕ್ಕೆ ಬಿದ್ದು 1.66 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ.!

ಎಚ್ಚರ.! ಮಾಯಾಂಗನೆ ಮೋಸದ ಜಾಲಕ್ಕೆ ಬಿದ್ದು 1.66 ಕೋಟಿ ರೂ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ.!

ಇಂದಿನ ಸ್ಮಾರ್ಟ್‌ಫೋನ್ ಯುಗದಲ್ಲಿ ಜಗತ್ತು ನಮ್ಮ ಕೈವಶದಲ್ಲಿದ್ದಂತೆ ಭಾಸವಾಗುತ್ತದೆ, ಆದರೆ ಇದೇ ಸ್ಮಾರ್ಟ್‌ಫೋನ್ ಎಚ್ಚರ ತಪ್ಪಿದರೆ ಜೀವನವಿಡೀ ದುಡಿದ ಹಣವನ್ನು ಕ್ಷಣಾರ್ಧದಲ್ಲಿ ಮಾಯವಾಗಿಸಬಹುದು.ಹೌದು.    ವಿಶೇಷವಾಗಿ ಡೇಟಿಂಗ್ ಆ್ಯಪ್‌ಗಳ ಮೂಲಕ ನಡೆಯುವ ವಂಚನೆಗಳು ಈಗ ಆತಂಕಕಾರಿ ಮಟ್ಟಕ್ಕೆ ತಲುಪಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸುಂದರ ಯುವತಿಯ ಮಾತುಗಳನ್ನು ನಂಬಿ ಬರೋಬ್ಬರಿ 1.66 ಕೋಟಿ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆ ಹಿನ್ನೆಲೆ

ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಸೌರವ್ ದುಬೆ ಎಂಬುವರು ಫೆಬ್ರವರಿ 15 ರಂದು ‘ಟಾಂಟನ್’ (Tantan) ಡೇಟಿಂಗ್ ಆ್ಯಪ್ ಮೂಲಕ ರಿಯಾ ಅಗರ್ವಾಲ್ ಎಂಬುವವರನ್ನು ಪರಿಚಯ ಮಾಡಿಕೊಂಡರು.ಆರಂಭದಲ್ಲಿ ಸಾಮಾನ್ಯ ಚಾಟಿಂಗ್ ಮೂಲಕ ಶುರುವಾದ ಪರಿಚಯ, ದಿನಗಳೆದಂತೆ ಆಡಿಯೋ ಮತ್ತು ವಿಡಿಯೋ ಕರೆಗಳ ಮೂಲಕ ಆತ್ಮೀಯತೆಯಾಗಿ ಬೆಳೆಯಿತು.ಮದುವೆಯಾಗುವುದಾಗಿ ನಂಬಿಸಿ ಆಕೆ ಸೌರವ್ ಅವರನ್ನು ತನ್ನ ಮಾತುಗಳ ಬಲೆಗೆ ಬೀಳಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಂಚನೆ ನಡೆದದ್ದು ಹೇಗೆ ?

ಸೌರವ್ ಸಂಪೂರ್ಣವಾಗಿ ನಂಬಿದ್ದಾರೆ ಎಂದು ಖಚಿತಪಡಿಸಿಕೊಂಡ ಆಕೆ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಕೋಟಿಗಟ್ಟಲೆ ಲಾಭ ಗಳಿಸಬಹುದು ಎಂದು ಆಮಿಷವೊಡ್ಡಿದರು.ರಿಯಾನ ಮಾತುಗಳನ್ನು ನಂಬಿದ ಸೌರವ್, ಮೂರು ತಿಂಗಳ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 1.66 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದರು.

ಆದರೆ, ಸೌರವ್‌ಗೆ ಕೇವಲ 4,250 ರೂಪಾಯಿ ಮಾತ್ರ ಹಿಂತಿರುಗಿ ಬಂದಿತು. ತನ್ನ ಹಣ ಹಾಗೂ ಲಾಭದ ಬಗ್ಗೆ ಕೇಳಿದಾಗ ಆಕೆ ಸಬೂಬು ಹೇಳಲು ಆರಂಭಿಸಿದರು.ಸೌರವ್ ತೀವ್ರವಾಗಿ ಪ್ರಶ್ನಿಸಿದಾಗ, ಆಕೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದರು.

ತಾನು ಮೋಸ ಹೋಗಿರುವುದನ್ನು ಅರಿತ ಸೌರವ್, ಬೆಂಗಳೂರಿನ ಸೌತ್ ಈಸ್ಟ್ ವಿಭಾಗದ ಸಿಇಎನ್ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಡೇಟಿಂಗ್ ಆ್ಯಪ್‌ಗಳಲ್ಲಿ ಪರಿಚಯವಾಗುವ ಅಪರಿಚಿತರು ಹಣ, ಹೂಡಿಕೆ ಅಥವಾ ಕ್ರಿಪ್ಟೋಕರೆನ್ಸಿ ಬಗ್ಗೆ ಮಾತನಾಡಿದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು ಮತ್ತು ಮುಖ ಪರಿಚಯವಿಲ್ಲದವರ ಮಾತು ನಂಬಿ ಹಣ ವರ್ಗಾಯಿಸುವುದು ಅಪಾಯಕಾರಿ ಎಂದು ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular