HomeKarnatakaಅಕ್ರಮ ವಿದ್ಯುತ್ ಸಂಪರ್ಕ : ಬೆಸ್ಕಾಂನಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆಗೆ 68 ಸಾವಿರ ದಂಡ!

ಅಕ್ರಮ ವಿದ್ಯುತ್ ಸಂಪರ್ಕ : ಬೆಸ್ಕಾಂನಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆಗೆ 68 ಸಾವಿರ ದಂಡ!

ಬೆಂಗಳೂರು:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ವಾಸದ ಮನೆಗೆ ದೀಪಾವಳಿ ಹಬ್ಬದ ವೇಳೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪ್ರಕರಣದಲ್ಲಿ ಬೆಸ್ಕಾಂ 68 ಸಾವಿರ ರೂ. ದಂಡ ವಿಧಿಸಿದೆ.

ದೀಪಾವಳಿಯಂದು  ಬೆಂಗಳೂರಿನ ಜೆಪಿ ನಗರದಲ್ಲಿನ ತಮ್ಮ ನಿವಾಸಕ್ಕೆ ದೀಪಾಲಂಕಾರ ಮಾಡಲು ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ವಿದ್ಯುತ್ ವಿತರಣಾ ಕಂಪನಿ ಬೆಸ್ಕಾಂ ದೂರು ದಾಖಲಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಸ್ಕಾಂ ಅಧಿಕಾರಿಗಳ  ಬುಧವಾರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆಗೆ ಪರಿಶೀಲನೆಗೆ ವಿಡಿಯೋ ಆಧರಿಸಿ ಬೆಸ್ಕಾಂನ ಜಾಗೃತ ಸಮಿತಿ ಭಾರತೀಯ ವಿದ್ಯುತ್ ಕಾಯ್ದೆಯಡಿ ದೂರು ದಾಖಲಿಸಿತ್ತು. ಇದೀಗ ಬೆಸ್ಕಾಂ ಹೆಚ್.ಡಿ.ಕುಮಾರಸ್ವಾಮಿಗೆ 68 ಸಾವಿರ  ರೂ. ದಂಡ ವಿಧಿಸಿದೆ. ಶೀಘ್ರವೇ ದಂಡ ಪಾವತಿಸುವುದಾಗಿ ಅಧಿಕಾರಿಗಳಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular