HomeKarnatakaBIG NEWS: ಬೆಂಗಳೂರಿನಲ್ಲಿ CNG ದರ ಕೇಳಿ ಶಾಕ್ ಆದ ಗ್ರಾಹಕರು: 2 ರೂಪಾಯಿ ದಿಢೀರ್...

BIG NEWS: ಬೆಂಗಳೂರಿನಲ್ಲಿ CNG ದರ ಕೇಳಿ ಶಾಕ್ ಆದ ಗ್ರಾಹಕರು: 2 ರೂಪಾಯಿ ದಿಢೀರ್ ಏರಿಕೆ

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನೆಲ್ಲೇ ನೈಸರ್ಗಿಕ ಅನಿಲ (ಸಿಎನ್​​ಜಿ) ಬೆಲೆಯೂ ಏರಿಕೆಯಾಗಿದೆ. ಕಂಪನಿಗಳು 9 ದಿನದಲ್ಲಿ ಮೂರನೇ ಬಾರಿ ಸಿಎನ್‌ಜಿ ದರ ಏರಿಸಿವೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಎನ್ ಜಿ ದರ ಕೇಳಿ ಗ್ರಾಹಕರೇ ಶಾಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ಸಿಎನ್ ಜಿ ದರ2 ರೂಪಾಯಿ ಹೆಚ್ಚಳವಾಗಿದೆ. ಕೆಜಿ ಸಿಎನ್​​ಜಿ 93 ರೂಪಾಯಿಯಿಂದ 95 ರೂಪಾಯಿ ಏರಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ವಾಹನ ಸವಾರರು ಕಂಗಾಲಾಗಿದ್ದಾರೆ. ನಿನ್ನೆ 93 ರೂಪಾಯಿ ಇದ್ದ ಸಿಎನ್ ಜಿ ದರ ಇಂದು 95 ರೂಪಾಯಿ ದಿಢೀರ್ ಏರಿಕೆಯಾಗಿದ್ದು, ಆಟೋ, ಕ್ಯಾಬ್ ಚಾಲಕರು ಪರದಾಡುವಂತಾಗಿದೆ.

ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದ ನಡುವೆ ಇಂಧನ ಬಿಕ್ಕಟ್ಟು ಎದುರಾಗಿದ್ದು, ತೈಲ ಬೆಲೆ ದಿನದಿಂದ ದಿನಕ್ಕೆ ಏರ್ಕೆಯಾಗುತ್ತಿದೆ. ಇದು ಜನಸಾಮಾನ್ಯರ ಬದುಕನ್ನೇ ದುಸ್ತರಗೊಳಿಸುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular