HomeLatest NewsBREAKING: ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ: ಕೆನರಾ ಬ್ಯಾಂಕ್ ಗೆ ನುಗ್ಗಿ ಸ್ಟ್ರಾಂಗ್ ರೂಮ್...

BREAKING: ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ: ಕೆನರಾ ಬ್ಯಾಂಕ್ ಗೆ ನುಗ್ಗಿ ಸ್ಟ್ರಾಂಗ್ ರೂಮ್ ವೈರ್ ಕಟ್ ಮಾಡುತ್ತಿದ್ದಂತೆ ಸೈರನ್ ಆನ್: ಎಸ್ಕೇಪ್ ಆದ ಕಳ್ಳ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪ್ರತಿಷ್ಠಿತ ಬ್ಯಾಂಕ್ ದರೋಡೆಗೆ ಯತ್ನ ನಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೆನರಾ ಬ್ಯಾಂಕ್ ಶಾಖೆಯೊಂದಕ್ಕೆ ಕನ್ನ ಹಾಕಲು ಯತ್ನಿಸಿ ಸಾಧ್ಯವಾಗದೇ ಕಳ್ಳ ಪರಾರಿಯಾಗಿರುವ ಘಟನೆ ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿ ನಡೆದಿದೆ.

ಶೇಷಾದ್ರಿಪುರಂನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಡರಾತ್ರಿ ಕಳ್ಳನೊಬ್ಬ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ್ದಾನೆ. ಬ್ಯಾಂಕ್ ಒಳಗೆ ನುಗ್ಗಿರುವ ಕಳ್ಳ, ಪೂರ್ತಿ ಬ್ಯಾಂಕ್ ನ್ನು ಸರ್ಚ್ ಮಾಡಿದ್ದಾನೆ. ಬಳಿಕ ಸ್ಟ್ರಾಂಗ್ ರೂಮ್ ಬಳಿ ಬಂದು ವರ್ ಕಟ್ ಮಾಡುತ್ತಿದ್ದಾಗ ಸೈರನ್ ಆನ್ ಆಗಿ ಕೂಗಲಾರಂಭಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೈರನ್ ಶಬ್ಧ ಜೋರಾಗಿ ಕೂಗುತ್ತಿದ್ದಂತೆ ಕಂಗಾಲಾದ ಕಳ್ಳ ಕಳ್ಳತನ ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾನೆ. ಓರ್ವ ಕಳ್ಳನಿಂದ ಬ್ಯಾಂಕ್ ದರೋಡೆಗೆ ಯತ್ನ ನಡೆದಿದ್ದು, ಬ್ಯಾಂಕ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನಾ ಸ್ಥಳಕ್ಕೆ ಶೇಷಾದ್ರಿಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳನ ಬಂಧನಕ್ಕಾಗಿ ಬಲೆ ಬೀಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular