HomeKarnatakaBIG NEWS: ಬೆಂಗಳೂರು: ಬಸ್ ನಿಲ್ದಾಣ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

BIG NEWS: ಬೆಂಗಳೂರು: ಬಸ್ ನಿಲ್ದಾಣ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅದೂ ಪೊಲೀಸ್ ಕಮೀಷನರ್ ಕಚೇರಿಯ ಹಿಂಭಾಗವಿದ್ದ ಬಸ್ಟ್ಯಾಂಡ್ ಕಳ್ಳ ತನ ಪ್ರಕರಣ ಮೂರು ದಿನಗಳಿಂದ ಭಾರಿ ಸುದ್ದಿ ಮಾಡಿತ್ತು. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಪೊಲೀಸ್ ಕಮೀಷನರ್ ಕಚೇರಿಯ ಹಿಂಭಾಗ, ವಿಧಾನಸೌಧದಿಂದ 1 ಕಿ.ಮೀ ಗಿಂತ ಕಡಿಮೆ ದೂರವಿರುವ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಏಕಾಏಕಿ ನಾಪತ್ತೆಯಾಗಿತ್ತು. ಕಳ್ಳರ್ಯಾರೋ ಬಸ್ ಶೆಲ್ಟರ್ ಅನ್ನೇ ಕದ್ದೊಯ್ದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಸ್ ತಂಗುದಾಣ ಕಳ್ಳತನವೂ ಆಗಿಲ್ಲ, ನಿಲ್ದಾಣದ ಶೆಲ್ಟರ್ ನ್ನು ಕಳ್ಳರು ಕೊದ್ದೊಯ್ದೂ ಇಲ್ಲ. ಬದಲಾಗಿ ಬಿಬಿಎಂಪಿ ಅಧಿಕಾರಿಗಳು ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಈ ಬಸ್ಟ್ಯಾಂಡ್ ನ್ನು ತೆರವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಕೂಡ ಸ್ಪಷ್ಟ ಪಡಿಸಿದ್ದು, ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಇಲ್ಲಿನ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular