ಬುಕಿಂಗ್ ಕ್ಯಾನ್ಸಲ್​ ಮಾಡಿದ ಉಬರ್​ ಡ್ರೈವರ್​ ಕೊಟ್ಟಿದ್ದು ಇಂಟ್ರಸ್ಟಿಂಗ್‌ ಕಾರಣ

ಬೆಂಗಳೂರು: ಕಚೇರಿಯಿಂದ ಮನೆಗೆ ಹೋಗುವ ದಾರಿಯಲ್ಲಿ ಕ್ಯಾಬ್ ಅಥವಾ ಆಟೋವನ್ನು ಕಾಯ್ದಿರಿಸುವಾಗ ಪಡುವ ಪರಿಪಾಟಲು ಅಷ್ಟಿಷ್ಟಲ್ಲ. ಬಹಳ ಕಷ್ಟಪಟ್ಟು ಒಂದು ಕ್ಯಾಬ್​ ಬುಕ್​ ಮಾಡಿದರೆ, ಚಾಲಕ ನಿಮ್ಮ ಸ್ಥಳಕ್ಕೆ ಬರುತ್ತಾರೆ ಎಂಬ ಖಚಿತತೆ ಇರುವುದಿಲ್ಲ. ಬರುವುದಾಗಿ ಹೇಳಿದರೂ ‘ಆನ್‌ಲೈನ್‌ನಲ್ಲಿ ಪಾವತಿ ಮಾಡುವುದೇ? ಅದೇ ಇದೇ ಎಂಬ ಹಲವು ಪ್ರಶ್ನೆಗಳಿಗೆ ಉತ್ತರವನ್ನೂ ನೀವು ಹೇಳುವ ಅನಿವಾರ್ಯತೆ ಇದೆ.

ಈ ಎಲ್ಲದರ ನಡುವೆ, ಚಾಟ್ ಬಾಕ್ಸ್‌ನಲ್ಲಿ ಚಾಲಕರು ಪ್ರವಾಸವನ್ನು ಹೇಗೆ ನಿರಾಕರಿಸುತ್ತಾರೆ ಎಂಬುದನ್ನು ತೋರಿಸುವ ಹಲವಾರು ಪೋಸ್ಟ್‌ಗಳು ಇಂಟರ್​ನೆಟ್​ನಲ್ಲಿವೆ. ಅವುಗಳ ಪೈಕಿ ಕೆಲವು ತಮಾಷೆ ಎನ್ನಿಸುವುದೂ ಉಂಟು. ಅಂಥದ್ದೊಂದು ಚಾಟ್​ನ ಸ್ಕ್ರೀನ್​ಷಾಟ್​ ಅನ್ನು ಟ್ವಿಟರ್ ಬಳಕೆದಾರರಾದ ಆಶಿ ಎನ್ನುವವರು ಶೇರ್​ ಮಾಡಿದ್ದಾರೆ.

ಆಶಿ ಬೆಂಗಳೂರಿನಲ್ಲಿ ರೈಡ್ ಬುಕ್ ಮಾಡಲು ಬಯಸಿದ್ದರು ಮತ್ತು ಉಬರ್‌ನ ಸೇವೆಗಳನ್ನು ಆಯ್ಕೆ ಮಾಡಿಕೊಂಡರು. ಪ್ರವಾಸಕ್ಕೆ ಒಪ್ಪಿಕೊಂಡ ನಂತರವೂ, ಚಾಟ್ ಬಾಕ್ಸ್‌ನಲ್ಲಿ ಡ್ರೈವರ್‌ ಬರುವುದಿಲ್ಲ ಎಂದು ತಿರಸ್ಕರಿಸಿದ್ದಾನೆ.

ನಂತರ ಕಾರಣ ಕೇಳಿದಾಗ ಒಂದು ದಿನದ ಸಿಕ್ಕಾಪಟ್ಟೆ ಟ್ರಾಫಿಕ್​ ಸಮಸ್ಯೆಯಿಂದ ಸುಸ್ತಾಗಿದೆ ಎಂಬ ಉತ್ತರ ಕೊಟ್ಟಿದ್ದಾನೆ. ಇದರ ಸ್ಕ್ರೀನ್​ಷಾಟ್​ ಅನ್ನು ಆಶಿ ಶೇರ್​ ಮಾಡಿಕೊಂಡಿದ್ದಾರೆ.

ಹಲವು ಸುಳ್ಳು ಹೇಳುವವರ ನಡುವೆ ಈತ ನಿಜ ನುಡಿದಿರುವುದು ಸಂತೋಷ ಎಂದು ಹಲವರು ಹೇಳಿದ್ದಾರೆ.

 

Tired after a day of hustling at @peakbengaluru pic.twitter.com/XB6QnBWzO6 — Ashi (@ashimhta) January 25, 2023

https://twitter.com/shinghal_uday/status/1618503949312733186?ref_src=twsrc%5Etfw%7Ctwcamp%5Etweetembed%7Ctwterm%5E1618503949312733186%7Ctwgr%5E2014f43114e41e1a4c5808bcf08288539020a15a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbengaluru-woman-shares-screenshot-of-uber-drivers-honest-request-internet-in-splits-2327303-2023-01-27

https://twitter.com/peakbengaluru/status/1618544257937313792?ref_src=twsrc%5Etfw%7Ctwcamp%5Etweetembed%7Ctwterm%5E1618544257937313792%7Ctwgr%5E2014f43114e41e1a4c5808bcf08288539020a15a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbengaluru-woman-shares-screenshot-of-uber-drivers-honest-request-internet-in-splits-2327303-2023-01-27

https://twitter.com/arjunk30/status/1618589870389354496?ref_src=twsrc%5Etfw%7Ctwcamp%5Etweetembed%7Ctwterm%5E1618589870389354496%7Ctwgr%5E2014f43114e41e1a4c5808bcf08288539020a15a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fbengaluru-woman-shares-screenshot-of-uber-drivers-honest-request-internet-in-splits-2327303-2023-01-27

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read