GOOD NEWS: ಪ್ರಯಾಣಿಕರ ಗಮನಕ್ಕೆ: ಬೆಂಗಳೂರು, ವಿಜಯಪುರ, ಬೆಳಗಾವಿಗೆ ವಿಶೇಷ ರೈಲು ಆರಂಭ

ಬೆಂಗಳೂರು: ಸಾಲು ಸಾಲು ಹಬ್ಬಳ ಜೊತೆಗೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ಬೆಂಗಳೂರು-ವಿಜಯಪುರ-ಬೆಳಗಾವಿ ನಡುವೆ ವಿಶೇಷ ರೈಲು ಸೇವೆ ಘೋಷಿಸಿದೆ.

ಬೆಂಗಳೂರಿನ ಯಶವಂತಪುರ ಮತ್ತು ಬೆಳಗಾವಿ ನಡುವೆ ಮತ್ತು ಎಸ್‌ಎಂವಿಟಿ ಬೆಂಗಳೂರಿನಿಂದ ವಿಜಯಪುರ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 5 ರಿಂದ ಈ ವಿಶೇಷ ರೈಲುಗಳ ಸೇವೆ ಆರಂಭವಾಗಲಿದೆ.

ರೈಲು ಸಂಖ್ಯೆ 06555 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್, ಸೆಪ್ಟೆಂಬರ್ 5 ರಂದು ಸಂಜೆ 7.30 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 7.15 ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 06556 ಸೆಪ್ಟೆಂಬರ್ 6 ರಂದು ಬೆಳಿಗ್ಗೆ 8.45 ಕ್ಕೆ ಬೆಳಗಾವಿಯಿಂದ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಯಶವಂತಪುರವನ್ನು ತಲುಪಲಿದೆ. ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರದ ಎರಡೂ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗದೆ.

ರೈಲು ಸಂಖ್ಯೆ 06557 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 6 ರಂದು ರಾತ್ರಿ 10.15 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.15 ಕ್ಕೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 06558 ಸೆಪ್ಟೆಂಬರ್ 8 ರಂದು ಸಂಜೆ 5.30 ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ಬೆಳಿಗ್ಗೆ 4.30 ಕ್ಕೆ ಯಶವಂತಪುರವನ್ನು ತಲುಪಲಿದೆ. ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ಎರಡೂ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆ ಹೊಂದಿದೆ.

ರೈಲು ಸಂಖ್ಯೆ 06577 ಎಸ್​ಎಂವಿಟಿ ಬೆಂಗಳೂರು-ವಿಜಯಪುರ-ಎಸ್​ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ಸೆಪ್ಟೆಂಬರ್ 5 ಮತ್ತು 7 ರಂದು ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 2.05 ಕ್ಕೆ ವಿಜಯಪುರ ತಲುಪಲಿದೆ. ರೈಲು ಸಂಖ್ಯೆ 06578 ವಿಜಯಪುರದಿಂದ ಸೆಪ್ಟೆಂಬರ್ 6 ಮತ್ತು 8ರಂದು ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 11.15ಕ್ಕೆ ಬೆಂಗಳೂರು ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕ್ಯಾಂಟ್, ತೊರ್ನಗಲ್ಲು, ಹೊಸಪೇಟೆ, ಗದಗ, ಬಾದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿಯಲ್ಲಿ ನಿಲುಗಡೆಯಾಗಲಿದೆ. ಪ್ರಯಾಣಿಕರು ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಪರಿಶೀಲಿಸಿ ಟಿಕೆಟ್ ಬುಕಿಂಗ್ ಮಾಡಬಹುದು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read