HomeKarnatakaರಾಜ್ಯದ ಜನತೆಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲೇ ಅಮೆರಿಕ ವೀಸಾ ಸೇವೆ, ಜ. 17ರಿಂದ ಕಾನ್ಸುಲೇಟ್ ಆರಂಭ

ರಾಜ್ಯದ ಜನತೆಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲೇ ಅಮೆರಿಕ ವೀಸಾ ಸೇವೆ, ಜ. 17ರಿಂದ ಕಾನ್ಸುಲೇಟ್ ಆರಂಭ

ಬೆಂಗಳೂರು: ಬೆಂಗಳೂರಿನಲ್ಲಿ ಜನವರಿ 17ರಂದು ಅಮೆರಿಕ ಕಾನ್ಸುಲೇಟ್ ಕಾರ್ಯಾರಂಭ ಮಾಡಲಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಕಚೇರಿ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಅಮೆರಿಕ ವೀಸಾ ಸೇವೆಗೆ ಅವಕಾಶ ಲಭ್ಯವಾಗಲಿದೆ.

ಇದರಿಂದ ಕನ್ನಡಿಗರು ಇನ್ನು ಚೆನ್ನೈ ಸೇರಿ ಬೇರೆ ರಾಜ್ಯಗಳಿಗೆ ಹೋಗುವ ಬದಲು ಬೆಂಗಳೂರಿನಲ್ಲಿಯೇ ಅಮೆರಿಕ ವೀಸಾ ಮತ್ತು ಸಂಬಂಧಿತ ಸೇವೆ ಪಡೆಯಬಹುದಾಗಿದೆ. ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಈಗಾಗಲೇ ಯುನೈಟೆಡ್ ಸ್ಟೇಟ್ಸ್ ಕಮರ್ಷಿಯಲ್ ಸರ್ವಿಸ್ ಕಚೇರಿ ಇದ್ದು, ಅದೇ ಸ್ಥಳದಲ್ಲಿ ಧೂತವಾಸ  ಕಚೇರಿ ಕಾರ್ಯರಂಭ ಮಾಡಲಿದೆ.

ಬೆಂಗಳೂರಿನಲ್ಲಿಯೇ ಅಮೆರಿಕ ವೀಸಾ ಸೇವೆ ಸಿಗುವುದರಿಂದ ಜನರಿಗೆ ಹಣ ಮತ್ತು ಸಮಯ ಉಳಿತಾಯವಾಗಲಿದ್ದು, ಅನುಕೂಲವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular