ಬಾಡೂಟ ಸವಿದಿದ್ದ ಮನೆಗೇ ಕನ್ನ; ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಭರ್ಜರಿ ಬಾಡೂಟ ಸೇವಿಸಿದ್ದ ಮನೆಗೆ ಖತರ್ನಾಕ್ ಆರೋಪಿಯೊಬ್ಬ ಕನ್ನ ಹಾಕಿ ಕೋಟ್ಯಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ರೇವತಿ ಎಂಬುವವರು ಗೆಸ್ಟ್ ಹೌಸ್ ನಲ್ಲಿ ತಮ್ಮ ಮನೆದೇವರ ಪೂಜೆ ಮಾಡಿಸಿದ್ದರು. ಪೂಜೆ ಬಳಿಕ ದೇವರ ಮೆರವಣಿಗೆ ಮಾಡಿಸಿದ್ದರು. ಮೆರವಣಿಗೆ ವೇಳೆ ದೇವರಿಗೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಹಾಕಿ ಅಲಂಕಾರ ಮಾಡಲಾಗಿತ್ತು. ಪೂಜೆ ಬಳಿಕ ಬಾಡೂಟ ಹಾಕಿಸಿದ್ದರು. ಊಟಕ್ಕೆ ಪವನ್ ಎಂಬಾತ ಬಂದಿದ್ದ. ಊಟದ ಬಳಿಕ ದೇವರ ಮುಂದೆ ಇದ್ದ ಚಿನ್ನಾಭರಣ-ಬೆಳ್ಳಿ ಆಭರಣಗಳನ್ನು ಗಮನಿಸುತ್ತಿದ್ದ.

ಗೆಸ್ಟ್ ಹೌಸ್ ನಲ್ಲಿ ಕಾರ್ಯಕ್ರಮ ಮುಗಿದ ಬಳಿಕ ರೇವತಿ ಕುಟುಂಬ ಮೈಸೂರಿಗೆ ತೆರಳಿತ್ತು. ಈ ವೇಳೆ ಪವನ್ ಹೊಂಚು ಹಾಕಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ. ಗ್ಯಾಸ್ ಕಟರ್ ನಿಂದ ಕಿಟಕಿಯ ರಾಡ್ ಗಳನ್ನು ಕಟ್ ಮಾಡಿ ಮನೆಯೊಳಗೆ ನುಗ್ಗಿದ್ದಾನೆ. ಮನೆಗೆ ವಾಪಾಸ್ ಆದಾಗ ದೇವರ ಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು.

ಅನುಮಾನಗೊಂಡು ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡುದ್ದರು. ಇದೀಗ ಆರೋಪಿ ಪವನ್ ನನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 17 ಕೆಜಿ ಬೆಳ್ಳಿ ಹಾಗೂ 400 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read