HomeKarnatakaBREAKING : ಬೆಂಗಳೂರಿನಲ್ಲಿ ‘ತ್ರಿಕೋನ ಪ್ರೇಮಕಥೆ’ , ಪ್ರೀತಿಸಿದ ಹುಡುಗಿಗಾಗಿ ಸ್ನೇಹಿತನ ಬರ್ಬರ ಹತ್ಯೆ.!

BREAKING : ಬೆಂಗಳೂರಿನಲ್ಲಿ ‘ತ್ರಿಕೋನ ಪ್ರೇಮಕಥೆ’ , ಪ್ರೀತಿಸಿದ ಹುಡುಗಿಗಾಗಿ ಸ್ನೇಹಿತನ ಬರ್ಬರ ಹತ್ಯೆ.!

ಬೆಂಗಳೂರು : ಬೆಂಗಳೂರಿನಲ್ಲಿ ತ್ರಿಕೋನ ಪ್ರೇಮಕಥೆ ಕೊಲೆಯಲ್ಲಿ ಅಂತ್ಯವಾಗಿದೆ.ಓರ್ವ ಯುವತಿಗಾಗಿ ಇಬ್ಬರು ಯುವಕರ ನಡುವೆ ಜಗಳ ನಡೆದು ಕೊನೆಯಲ್ಲಿ ಓರ್ವ ಯುವಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.

ವರುಣ್ ಹಾಗೂ ದಿನೇಶ್ ಎಂಬುವವರು ಒಂದೇ ಹುಡುಗಿಯನ್ನು ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಒಂದು ದಿನ ಜಗಳ ತಾರಕಕ್ಕೇರಿದ್ದು ಸಿಟ್ಟಿಗೆದ್ದ ದಿನೇಶ್ ವರುಣ್ (28) ಎಂಬ ಯುವಕನನ್ನು ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ದಿನೇಶ್ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಒಟ್ಟಿಗೆ ಇದ್ದ ಸಹಪಾಠಿಯಿಂದಲೇ ಈ ಕೊಲೆ ನಡೆದಿದೆ. ಮೃತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.ಸ್ನೇಹಿತನೇ ಇನ್ನೋರ್ವ ಸ್ನೇಹಿತನನ್ನು ಕೊಲೆ ಮಾಡಿರುವುದು ಆತಂಕಕಾರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂದರ್ಭಿಕ ಚಿತ್ರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular