HomeLatest News7 ವರ್ಷ 4 ಕಂಪನಿ 50% ಹೈಕ್ ಸಿಕ್ಕಿದ್ರೂ ಕಾಡ್ತಿದೆ ಒಂಟಿತನ :ವೈರಲ್ ಆಯ್ತು ಬೆಂಗಳೂರು...

7 ವರ್ಷ 4 ಕಂಪನಿ 50% ಹೈಕ್ ಸಿಕ್ಕಿದ್ರೂ ಕಾಡ್ತಿದೆ ಒಂಟಿತನ :ವೈರಲ್ ಆಯ್ತು ಬೆಂಗಳೂರು ಟೆಕ್ಕಿಯ ಮನದ ಮಾತು

ಬೆಂಗಳೂರಿನ ಟೆಕ್ಕಿಯೊಬ್ಬರು ಕಾರ್ಪೊರೇಟ್ ಲೋಕದ ಮಿನುಗುವ ಬದುಕಿನ ಹಿಂದಿರುವ ಕಹಿಸತ್ಯವನ್ನು ತೆರೆದಿಟ್ಟಿದ್ದಾರೆ. ಕೈತುಂಬಾ ಸಂಬಳ ವಿದೇಶಿ ಪ್ರವಾಸ ಹಾಗೂ ಐಷಾರಾಮಿ ಜೀವನಶೈಲಿ ಇದ್ದರೂ ಸಹ ನೆಮ್ಮದಿಗಾಗಿ ಹುಡುಕಾಡುವ ಇಂದಿನ ಯುವಜನತೆಯ ಸ್ಥಿತಿಯನ್ನು ಇವರು ಮನವರಿಕೆ ಮಾಡಿದ್ದಾರೆ. ಬಿಶಿಷ್ಟ್ ಶೋಮ್ ಎಂಬುವವರು ತಮ್ಮ ಏಳು ವರ್ಷಗಳ ವೃತ್ತಿಜೀವನದ ನಂತರವೂ ಅನುಭವಿಸುತ್ತಿರುವ ಭಾವನಾತ್ಮಕ ಶೂನ್ಯತೆಯ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಲಕ್ಷಾಂತರ ಜನರ ಹೃದಯ ಮುಟ್ಟಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

https://www.instagram.com/reel/DXvX6jGzASc/?utm_source=ig_web_copy_link&igsh=NTc4MTIwNjQ2YQ==

ಏಳು ವರ್ಷಗಳ ಪಯಣ, ಆದರೂ ಸಿಗದ ನೆಮ್ಮದಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಬಿಶಿಷ್ಟ್ ಶೋಮ್ ಎಂಬ ಟೆಕ್ಕಿ ಕಳೆದ ಏಳು ವರ್ಷಗಳಿಂದ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಅವರು ನಾಲ್ಕು ಬಾರಿ ಉದ್ಯೋಗ ಬದಲಿಸಿದ್ದಾರೆ. ವೃತ್ತಿಜೀವನದಲ್ಲಿ ಉತ್ತಮ ಬೆಳವಣಿಗೆ ಮತ್ತು ಶೇ. 50ರಷ್ಟು ವೇತನ ಏರಿಕೆ ಕಂಡಿದ್ದರೂ ಸಹ, ತಮಗೆ ಭಾವನಾತ್ಮಕ ಶೂನ್ಯತೆ ಕಾಡುತ್ತಿದೆ ಎಂದು ಅವರು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಬಿಶಿಷ್ಟ್ ಶೋಮ್ ಹಂಚಿಕೊಂಡ ಮನದಾಳದ ಮಾತುಗಳು:

ಕಾರ್ಪೊರೇಟ್ ಜೀವನದಿಂದ ನೀವು ಎಷ್ಟೇ ಹಣ ಗಳಿಸಿದರೂ ಶೂನ್ಯತೆಯ ಭಾವನೆ ಕಾಡುತ್ತಲೇ ಇರುತ್ತದೆ. ಶೇ. 50ರಷ್ಟು ಹೈಕ್ ಆದರೂ ಇದು ದೂರವಾಗುವುದಿಲ್ಲ ಎಂದು ಶೋಮ್ ಹೇಳಿದ್ದಾರೆ.

ವೇತನ ಹೆಚ್ಚಳದಿಂದ ದೊಡ್ಡ ಮನೆ ಇಷ್ಟವಾದ ಆಹಾರ ಮತ್ತು ಪ್ರವಾಸ ಸಾಧ್ಯವಾಗಬಹುದು. ಆದರೆ, ಇದನ್ನೆಲ್ಲಾ ಗಳಿಸಲು ದಿನಕ್ಕೆ 8 ರಿಂದ 9 ಗಂಟೆಗಳ ಕಾಲ ಒಂದೇ ಕೆಲಸವನ್ನು ಏಕೆ ಮಾಡುತ್ತಿದ್ದೇನೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಅವರು ವಿಷಾದಿಸಿದ್ದಾರೆ.ಹಣವೇ ಎಲ್ಲವಲ್ಲ ದುಡಿದು ಗಳಿಸುವ ಹಣ ಬದುಕಿನ ನಿಜವಾದ ಅರ್ಥವನ್ನು ಹುಡುಕಿಕೊಡುವುದಿಲ್ಲ ಎಂಬುದು ಅವರ ಅನುಭವದ ನುಡಿಯಾಗಿದೆ.

ನೆಟ್ಟಿಗರ ಬೆಂಬಲ ಮತ್ತು ಭಾರಿ ಚರ್ಚೆ:

ಬಿಶಿಷ್ಟ್ ಅವರ ಈ ಪೋಸ್ಟ್ ಕಾರ್ಪೊರೇಟ್ ಜಗತ್ತಿನ ಉದ್ಯೋಗ ತೃಪ್ತಿಯ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ಅನೇಕರು ಪ್ರತಿಕ್ರಿಯೆ ನೀಡಿದ್ದು, “ನಾವೂ ಸಹ ಇದೇ ರೀತಿಯ ಅನುಭವ ಎದುರಿಸುತ್ತಿದ್ದೇವೆ” ಎಂದು ಬೇಸರ ತೋಡಿಕೊಂಡಿದ್ದಾರೆ.

ಮತ್ತೋರ್ವ ಟೆಕ್ಕಿ ಪ್ರತಿಕ್ರಿಯಿಸಿ, “ಸಂಬಳ ಹೆಚ್ಚಾದಾಗ ಒಂದು ತಿಂಗಳು ಖುಷಿಯಾಗುತ್ತದೆ, ನಂತರ ಮತ್ತೆ ಅದೇ ಶೂನ್ಯತೆ ಕಾಡುತ್ತದೆ. ಈ ಸತ್ಯವನ್ನು ಹೇಳಲು ಅನೇಕರು ಸಿದ್ಧರಿಲ್ಲ” ಎಂದು ಬೆಂಬಲ ಸೂಚಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular