HomeKarnatakaಮೆಟ್ರೋ, ಐಟಿ, ಫ್ಲೈಓವರ್, ವಿಕಾಸಸೌಧ ನಿರ್ಮಾತೃ: ಬೆಂಗಳೂರು ಸಿಂಗಾಪೂರ ಮಾಡುವ ಕನಸು ಕಂಡಿದ್ದ ಎಸ್.ಎಂ. ಕೃಷ್ಣ

ಮೆಟ್ರೋ, ಐಟಿ, ಫ್ಲೈಓವರ್, ವಿಕಾಸಸೌಧ ನಿರ್ಮಾತೃ: ಬೆಂಗಳೂರು ಸಿಂಗಾಪೂರ ಮಾಡುವ ಕನಸು ಕಂಡಿದ್ದ ಎಸ್.ಎಂ. ಕೃಷ್ಣ

ಬೆಂಗಳೂರು: ಮಾಜಿ ಸಿಎಂ ಎಸ್.ಎಂ. ಕೃಷ್ಣ(92) ನಿಧನರಾಗಿದ್ದಾರೆ. ಅವರು ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದರು. ಆಧುನಿಕ ಬೆಂಗಳೂರು ನಿರ್ಮಾಣದಲ್ಲಿ ಪ್ರಮುಖ ಪಾತ್ರ ಅವರದ್ದಾಗಿದೆ.

ವಿಕಾಸಸೌಧ ನಿರ್ಮಾಣ, ಮೆಟ್ರೋ, ಫ್ಲೈಓವರ್ ಗಳ ನಿರ್ಮಾಣದಲ್ಲಿ, ಬೆಂಗಳೂರನ್ನು ಐಟಿ, ಬಿಟಿ ಸಿಟಿಯಾಗಿ ರೂಪಿಸುವಲ್ಲಿ ಎಸ್.ಎಂ. ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ.

ಅವರು ರಾಜಕೀಯದಲ್ಲಿ ಸಾಕಷ್ಟು ಏಳು, ಬೀಳು ಕಂಡಿದ್ದರು. ಕಾವೇರಿ ಗಲಾಟೆ, ಬರಗಾಲ ಸಮಸ್ಯೆ, ಡಾ. ರಾಜಕುಮಾರ್ ಅಪಹರಣದಂತಹ ಎಲ್ಲಾ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು. ರಾಜಕಾರಣದಲ್ಲಿ ಸೈದ್ದಾಂತಿಕ ಟೀಕೆ ಮಾಡುತ್ತಿದ್ದರು. ಶಿಸ್ತು ರೂಢಿಸಿಕೊಂಡಿದ್ದರು. ಅವರು ತಾವು ಕೆಲಸ ಮಾಡಿದ ಕ್ಷೇತ್ರಗಳಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular