HomeKarnatakaBIG NEWS : ಬೆಂಗಳೂರಿಗರೇ ಗಮನಿಸಿ : ನಲ್ಲಿಗಳಿಗೆ ಕಡ್ಡಾಯವಾಗಿ ಏರೇಟರ್ ಅಳವಡಿಸುವಂತೆ ಜಲಮಂಡಳಿ ಸೂಚನೆ.!

BIG NEWS : ಬೆಂಗಳೂರಿಗರೇ ಗಮನಿಸಿ : ನಲ್ಲಿಗಳಿಗೆ ಕಡ್ಡಾಯವಾಗಿ ಏರೇಟರ್ ಅಳವಡಿಸುವಂತೆ ಜಲಮಂಡಳಿ ಸೂಚನೆ.!

ಬೆಂಗಳೂರು : ನೀರಿನ ಉಳಿತಾಯಕ್ಕಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಲು ಕಳೆದ ವರ್ಷ ಜಲಮಂಡಳಿ ಸೂಚನೆ ನೀಡಿತ್ತು, ಇದೀಗ ಈ ಬಾರಿ ಮತ್ತೆ ಜಲಮಂಡಳಿ ಈ ಸೂಚನೆ ನೀಡಿದೆ.

ನೀರಿನ ಅಭಾವದ ಹಿನ್ನೆಲೆಯಲ್ಲಿ ವಾಣಿಜ್ಯ ಕಟ್ಟಡಗಳು, ಅಪಾರ್ಟ್ಮೆಂಟ್ ಗಳು, ಮಾಲ್ ಗಳು, ಹೋಟೆಲ್, ರೆಸ್ಟೋರೆಂಟ್ ಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಏರಿಯೇಟರ್ ಅಳವಡಿಸುವಂತೆ ಜಲಮಂಡಳಿ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವವನ್ನು ತಡೆಯುವ ನಿಟ್ಟಿನಲ್ಲಿ ಅನಗತ್ಯ ನೀರು ಪೋಲಾಗುವ ಸ್ಥಳಗಳಲ್ಲಿ ನಲ್ಲಿಗಳಿಗೆ ಏರೇಟರ್ ಅಳವಡಿಸುವಂತೆ ಜಲಮಂಡಳಿ ಸೂಚಿಸಿದೆ. ಏರೇಟರ್ ಬಳಕೆಯನ್ನು ಕಡ್ಡಾಯ ಮಾಡುವುದರಿಂದ ಶೇ. 60 ರಿಂದ 85 ಪ್ರಮಾಣದ ನೀರನ್ನು ಉಳಿತಾಯ ಮಾಡಲು ಸಾಧ್ಯವಿದೆ. ಈ ಮೂಲಕ ನಿತ್ಯ 1.7 ಕೋಟಿ ಲೀಟರ್ ನೀರು ಉಳಿತಾಯವಾಗಲಿದೆ ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular