HomeLatest Newsಬೆಂಗಳೂರಿಗರೇ ಇತ್ತ ಗಮನಿಸಿ : ಇಂದಿನಿಂದ 3 ದಿನ 'ಕಾವೇರಿ ನೀರು' ಪೂರೈಕೆಯಲ್ಲಿ ವ್ಯತ್ಯಯ |Water...

ಬೆಂಗಳೂರಿಗರೇ ಇತ್ತ ಗಮನಿಸಿ : ಇಂದಿನಿಂದ 3 ದಿನ ‘ಕಾವೇರಿ ನೀರು’ ಪೂರೈಕೆಯಲ್ಲಿ ವ್ಯತ್ಯಯ |Water Supply

ಬೆಂಗಳೂರು: ಬೆಂಗಳೂರಿಗರೇ ಗಮನಿಸಿ ಇಂದಿನಿಂದ ಮೂರು ದಿನಗಳ ಕಾಲ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ತಿಳಿಸಿದೆ.

ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಹಾಗೂ 17ರಂದು ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಚಿತವಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲು ಜಲಮಂಡಳಿ ಮನವಿ ಮಾಡಿದೆ.

ನಿಯಮಿತ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳಲ್ಲಿ ಜಲರೇಚಕ ಯಂತ್ರಾಗಾರಗಳನ್ನು ಸೆ.15, 16 ಹಾಗೂ 17ರಂದು ಸ್ಥಗಿತಗೊಳಿಸಲಾಗುತ್ತದೆ.
ಕಾವೇರಿ 5ನೇ ಹಂತ ಸೆಪ್ಟೆಂಬರ್.15ರಿಂದ ಬೆಳಿಗ್ಗೆ 1 ರಿಂದ ಸೆಪ್ಟೆಂಬರ್.17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾವೇರಿ 1, 2, 3, 4,ರಲ್ಲಿ ಸೆಪ್ಟೆಂಬರ್ 16ರ ಬೆಳಿಗ್ಗೆ 6ರಿಂದ ಸೆಪ್ಟೆಂಬರ್ 17ರ ಬೆಳಿಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳ್ಳಲಿದೆ.ಇನ್ನು ಸಂಚಾರಿ ಕಾವೇರಿ ನೀರು ಪೂರೈಕೆ ಟ್ಯಾಂಕರ್ ಕೂಡ ಸ್ಥಗಿತಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುಂಚಿತವಾಗಿ ಹೆಚ್ಚಿನ ನೀರಿನ ಸಂಗ್ರಹ ಮಾಡಿಕೊಳ್ಳುವಂತೆ ಜಲಮಂಡಳಿ ಸೂಚಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular