HomeBusinessಬೆಂಗಳೂರಿನ ಬಾಡಿಗೆದಾರರೇ ಹುಷಾರ್ ಮನೆ ಮಾಲೀಕನ ಸೈಲೆಂಟ್ ಮೋಸ ಬಯಲು: ಅಗ್ರಿಮೆಂಟ್ ಸೈನ್ ಮಾಡುವ ಮುನ್ನ...

ಬೆಂಗಳೂರಿನ ಬಾಡಿಗೆದಾರರೇ ಹುಷಾರ್ ಮನೆ ಮಾಲೀಕನ ಸೈಲೆಂಟ್ ಮೋಸ ಬಯಲು: ಅಗ್ರಿಮೆಂಟ್ ಸೈನ್ ಮಾಡುವ ಮುನ್ನ ಎಚ್ಚರ

ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರು ಮತ್ತು ಮನೆ ಮಾಲೀಕರು ಸೌಹಾರ್ದಯುತವಾಗಿರುತ್ತಾರೆ ಎಂದು ನಂಬಿದ್ದರೆ, ನೀವು ಮೋಸ ಹೋಗುವ ಸಾಧ್ಯತೆ ಇದೆ ಇತ್ತೀಚೆಗೆ ಬಸವನಗರದ ಬಾಡಿಗೆದಾರರೊಬ್ಬರು ಹಂಚಿಕೊಂಡಿರುವ ವಿಷಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಮನೆ ಮಾಲೀಕರು ಎಗ್ರೀಮೆಂಟ್‌ (Rental Agreement) ನವೀಕರಣದ ವೇಳೆ ಯಾರಿಗೂ ತಿಳಿಯದಂತೆ ಷರತ್ತುಗಳನ್ನು ಬದಲಾಯಿಸಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಏನಿದು ಸೈಲೆಂಟ್ ಮೋಸ?
ರೆಡ್ಡಿಟ್‌ನಲ್ಲಿ ಈ ಕುರಿತು ಬರೆದುಕೊಂಡಿರುವ ಬಾಡಿಗೆದಾರರು, ತಾವು 2022 ರಿಂದ ಬಸವನಗರದ ಫ್ಲಾಟ್‌ನಲ್ಲಿ ವಾಸವಿದ್ದು, ಬಾಡಿಗೆಯನ್ನು ಎಂದಿಗೂ ತಡವಾಗಿ ಪಾವತಿಸಿಲ್ಲ ಎಂದು ತಿಳಿಸಿದ್ದಾರೆ. 2026 ರ lease renewal ಸಂದರ್ಭದಲ್ಲಿ, ಮಾಲೀಕರು ಯಾವುದೇ ಬದಲಾವಣೆಗಳಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಅನುಮಾನ ಬಂದ ಬಾಡಿಗೆದಾರರು ಹಳೆಯ ಮತ್ತು ಹೊಸ ಎಗ್ರೀಮೆಂಟ್‌ ಅನ್ನು ಪದೇ ಪದೇ ಓದಿ ಹೋಲಿಕೆ ಮಾಡಿದಾಗ, ಅಲ್ಲಿ ದೊಡ್ಡ ಮೋಸ ಅಡಗಿರುವುದು ಪತ್ತೆಯಾಗಿದೆ.

ಆದರೆ, ಬಾಡಿಗೆದಾರರು ಹಳೆಯ ಅಗ್ರಿಮೆಂಟ್ ಮತ್ತು ಹೊಸ ಡ್ರಾಫ್ಟ್ ಅನ್ನು ಸಾಲು-ಸಾಲಾಗಿ ಹೋಲಿಸಿ ನೋಡಿದಾಗ ಅಸಲಿ ಕಥೆ ಹೊರಬಂದಿದೆ. ಮಾಲೀಕರು ಯಾರಿಗೂ ತಿಳಿಯದಂತೆ ನೋಟಿಸ್ ಪಿರಿಯಡ್ ಅನ್ನು 1 ತಿಂಗಳಿಂದ 2 ತಿಂಗಳಿಗೆ ಏರಿಸಿದ್ದರು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಓನರ್, ನಾನು ಹೇಳಿದ್ದೇ ರೂಲ್ಸ್
ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದಾಗ ಅವರು ಉಡಾಫೆಯ ಉತ್ತರ ನೀಡಿದ್ದಾರೆ. ನಾನು ಫ್ಲಾಟ್ ಓನರ್ ಎಗ್ರೀಮೆಂಟ್‌ನಲ್ಲಿ ನಿಯಮಗಳನ್ನು ಹಾಕುವ ಹಕ್ಕು ನನಗಿದೆ ಎಂದು ಮಾಲೀಕರು ಅಹಂಕಾರದಿಂದ ಉತ್ತರಿಸಿದ್ದಾರೆ. ಈ ಘಟನೆ ಬಾಡಿಗೆದಾರರನ್ನು ಆತಂಕಕ್ಕೀಡು ಮಾಡಿದೆ.

ಈ ಪೋಸ್ಟ್ ನೋಡಿದ ನೂರಾರು ಮಂದಿ ರೆಡ್ಡಿಟ್ ಬಳಕೆದಾರರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ:

ಒಬ್ಬಳು ಮನೆ ಮಾಲೀಕಿ 5 ತಿಂಗಳ ಬಾಡಿಗೆಯನ್ನು ಅಡ್ವಾನ್ಸ್ ಆಗಿ ಕೇಳಿದಳು, ಕಾನೂನು ಪ್ರಕಾರ ಕೇವಲ 2 ತಿಂಗಳು ಎಂದು ಹೇಳಿದ್ದಕ್ಕೆ ಫೋನ್ ಕಟ್ ಮಾಡಿದಳು.”

ಮೌಖಿಕ ಒಪ್ಪಂದಗಳಿಗೆ ಬೆಲೆ ಇಲ್ಲ. ನೀವು ಮನೆ ಖಾಲಿ ಮಾಡುವಾಗ ಅಥವಾ ಅಡ್ವಾನ್ಸ್ ಹಣ ವಾಪಸ್ ಕೇಳುವಾಗ ಈ ಬದಲಾದ ಎಗ್ರೀಮೆಂಟ್ ನಿಮಗೆ ದೊಡ್ಡ ತೊಂದರೆ ಕೊಡಬಹುದು. ಆದ್ದರಿಂದ ಎಚ್ಚರ ಎಂದು ಹಲವರು ಎಚ್ಚರಿಸಿದ್ದಾರೆ.

ಹೋಲಿಕೆ ಮಾಡಿ: ಹೊಸ ಎಗ್ರೀಮೆಂಟ್‌ಗೆ ಸಹಿ ಹಾಕುವ ಮೊದಲು, ಹಳೆಯ ಎಗ್ರೀಮೆಂಟ್ ಜೊತೆ ಪ್ರತಿ ಪದವನ್ನೂ ಕೂಲಂಕಷವಾಗಿ ಪರಿಶೀಲಿಸಿ.

ಬರಹದಲ್ಲಿರಲಿ: ಯಾವುದೇ ಬದಲಾವಣೆಗಳಿದ್ದರೆ ಅದನ್ನು ಲಿಖಿತ ರೂಪದಲ್ಲಿ ಪಡೆದುಕೊಳ್ಳಿ.

ನಂಬಬೇಡಿ: ಮಾಲೀಕರು ಎಷ್ಟೇ ಒಳ್ಳೆಯವರಾಗಿ ಕಂಡರೂ, ಕೊನೆಗೆ ಇದು ಒಂದು ವ್ಯವಹಾರ (Business) ಎಂಬುದನ್ನು ಮರೆಯಬೇಡಿ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular