BREAKING : ಬೆಂಗಳೂರಿನಲ್ಲಿ ಮತ್ತೆ ಗುಡುಗು ಸಹಿತ ಮಳೆ : ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ..!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವರುಣಾರ್ಭಟ ಆರಂಭವಾಗಿದೆ. ನಿನ್ನೆ ಕೊಂಚ ಬಿಡುವುಪಡೆದಿದ್ದ ಮಳೆರಾಯ ಇಂದು ಮುಂಜಾನೆಯಿಂದಲೇ ಅಬ್ಬರಿಸಲು ಶುರು ಮಾಡಿದ್ದಾನೆ. ಬೆಂಗಳೂರು ನಗರದ ಹಲವೆಡೆ ಬೆಳಿಗ್ಗೆಯಿಂದ ಒಂದೇ ಸಮನೇ ಮಳೆ ಸುರಿಯುತ್ತಿದೆ.

ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವೀಕೆಂಡ್ ದಿನಗಳಲ್ಲೇ ವರುಣರಭಟ ಜೋರಾಗಿದ್ದು, ಜನರು ಮನೆಯಿಂದ ಹೊರಬರುವುದು ಕಷ್ಟವಗಿದೆ

ಬೆಂಗಳೂರಿನ ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಕೆ.ಆರ್. ಮಾರ್ಕೆಟ್, ಶಾಂತಿನಗರ, ಕೋರಮಂಗಲ, ವಿಧಾನಸೌಧ, ಶಿವಾಜಿನಗರ, ಜಯನಗರ, ತ್ಯಗರಾಜನಗರ, ಹನುಮಂತನಗರಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ಆರ್.ಆರ್.ನಗರ, ಗಿರಿನಗರ, ಮೈಸೂರು ರಸ್ತೆ, ಬಸವನಗುಡಿ, ಬನಶಂಕರಿ ಸುತ್ತಮುತ್ತ ಗುಡುಗು ಸಹಿತ ಮಳೆಯಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read