HomeKarnatakaBengaluru : ಬೆಂಗಳೂರಲ್ಲಿ 700 ಕ್ಕೂ ಹೆಚ್ಚು ಡ್ರಿಂಕ್ & ಡ್ರೈವ್ ಪ್ರಕರಣ ದಾಖಲು

Bengaluru : ಬೆಂಗಳೂರಲ್ಲಿ 700 ಕ್ಕೂ ಹೆಚ್ಚು ಡ್ರಿಂಕ್ & ಡ್ರೈವ್ ಪ್ರಕರಣ ದಾಖಲು

ಬೆಂಗಳೂರು : ‘ಮದ್ಯ’ ಸೇವಿಸಿ ವಾಹನ ಚಲಾಯಿಸಿದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಗ್ ಶಾಕ್ ನೀಡಿದ್ದು, ಬೆಂಗಳೂರು ನಗರದಾದ್ಯಂತ ಒಟ್ಟು 717 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಡಿಸೆಂಬರ್ 21 ರಿಂದ ಆರಂಭವಾದ ತಪಾಸಣೆಯಲ್ಲಿ ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ 717 ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನ ನಾಲ್ಕು ವಿಭಾಗಗಳಲ್ಲಿ ತಪಾಸಣೆ ನಡೆಸಿದ್ದು ಡಿಸೆಂಬರ್ 30 ರವರೆಗೆ 27,280 ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಿದ್ದಾರೆ. ಒಟ್ಟು 717 ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ದಕ್ಷಿಣ ವಿಭಾಗದಲ್ಲಿ 167 ಪಾನಮತ್ತ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಟ್ರಾಫಿಕ್ ಪೊಲೀಸರು 30 ಪ್ರಕರಣಗಳನ್ನು ದಾಖಲಿಸಿದ್ದಾರೆ . ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣೆ, ದಕ್ಷಿಣದ ಟ್ರಾಫಿಕ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 18 ಪ್ರಕರಣಗಳನ್ನು ದಾಖಲಿಸಲಾಗಿದೆ.ಒಟ್ಟು 717 ಚಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular