ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ ಮಳೆನೀರು

ಮಂಗಳವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣ ಜಲಾವೃತವಾಗಿದೆ. ಕಳೆದ ಮಾರ್ಚ್ ನಲ್ಲಿ ಮೋದಿ 13.71 ಕಿಮೀ ಉದ್ದದ ಮೆಟ್ರೋ ಮಾರ್ಗ ಉದ್ಘಾಟಿಸಿದ್ದು ತಿಂಗಳು ಕಳೆಯುವ ಮುನ್ನವೇ ಮೆಟ್ರೋ ನಿಲ್ದಾಣ ಜಲಾವೃತವಾಗಿದೆ.

ಮಾರ್ಚ್ 25ರ ಶನಿವಾರ ವೈಟ್‌ಫೀಲ್ಡ್ ನಿಂದ ಕೃಷ್ಣರಾಜಪುರದವರೆಗೆ ಸಾಗುವ 4,249 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಮೆಟ್ರೋ ಮಾರ್ಗವನ್ನು ಪ್ರಧಾನಿ ಉದ್ಘಾಟಿಸಿದ್ದರು.

ಮಳೆ ನೀರಿನಿಂದ ಮುಳುಗಡೆಯಾದ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ದೃಶ್ಯಗಳನ್ನು ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಾಗರಿಕ ವೇದಿಕೆಯಾದ ವೈಟ್‌ಫೀಲ್ಡ್ ರೈಸಿಂಗ್, ನಿಲ್ದಾಣದ ಪ್ಲಾಟ್‌ಫಾರ್ಮ್ ಮತ್ತು ಟಿಕೆಟಿಂಗ್ ಕೌಂಟರ್ ಬಳಿ ಮಳೆನೀರು ತುಂಬಿರುವ ಫೋಟೋಗಳನ್ನು ಟ್ವೀಟ್ ಮಾಡಿದೆ.

“ಹೊಚ್ಚಹೊಸ ನಲ್ಲೂರಹಳ್ಳಿ ಮೆಟ್ರೋ ನಿಲ್ದಾಣದ ಒಳಗೆ. ಪ್ಲಾಟ್‌ಫಾರ್ಮ್‌ನಲ್ಲಿ ಮತ್ತು ಟಿಕೆಟ್ ಕೌಂಟರ್ ಬಳಿ ನೀರು. ನಮ್ಮ ಮೆಟ್ರೋದ ನಿಲ್ದಾಣದೊಳಗೆ ಒಂದು ಸಣ್ಣ ಮಳೆಯಿಂದ ನೀರು ಸಂಪೂರ್ಣವಾಗಿ ಒಳಗೆ ನುಗ್ಗಿದೆ” ಎಂದು ಬರೆದಿದ್ದಾರೆ.

ಕೆಲವು ಪ್ರಯಾಣಿಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮೆಟ್ರೋ ಮೂಲಸೌಕರ್ಯ ಸಂಪೂರ್ಣ ಸಿದ್ಧವಾಗುವ ಮುನ್ನವೇ ಉದ್ಘಾಟನೆಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರರೊಬ್ಬರು ಸಣ್ಣ ಮಳೆಯ ನಂತರ ಹೀಗಾದರೆ, ಮುಂಗಾರು ಮಳೆಯಲ್ಲಿ ಏನಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

https://twitter.com/WFRising/status/1643263372853387265?ref_src=twsrc%5Etfw%7Ctwcamp%5Etweetembed%

https://twitter.com/shanojdevassy/status/1643267919898636288?ref_src=twsrc%5Etfw%7Ctwcamp%5Etweetembed%7Ctwterm%5E16

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read