HomeKarnatakaಬೆಂಗಳೂರಿಗರೇ ಗಮನಿಸಿ : ನಾಳೆ, ನಾಡಿದ್ದು ಈ ಮಾರ್ಗದಲ್ಲಿ `ಮೆಮು ರೈಲು’ ಸಂಚಾರ ರದ್ದು

ಬೆಂಗಳೂರಿಗರೇ ಗಮನಿಸಿ : ನಾಳೆ, ನಾಡಿದ್ದು ಈ ಮಾರ್ಗದಲ್ಲಿ `ಮೆಮು ರೈಲು’ ಸಂಚಾರ ರದ್ದು

ಬೆಂಗಳೂರು : ಸೆಪ್ಟೆಂಬರ್ 19 ರ ನಾಳೆ ಹಾಗೂ ಸೆಪ್ಟೆಂಬರ್ 20 ರಂದು ಬೆಂಗಳೂರಿನ ವಿವಿಧ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಕಚೇರಿ ತಿಳಿಸಿದೆ.

ನಿರ್ವಹಣಾ ಕಾಮಗಾರಿ ಕಾರಣದಿಂದ ನಾಳೆ, ನಾಡಿದ್ದು ಬೆಂಗಳೂರಿನ ವಿವಿಧ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಎಸ್ ಆರ್ ಬೆಂಗಳೂರು-ದೇವನಹಳ್ಳಿ-ಕೆಎಸ್ ಆರ್ ಬೆಂಗಳೂರು, ದೇವನಹಳ್ಳಿ-ಯಲಹಂಕ, ಯಲಹಂಕ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ, ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ, ದೇವನಹಳ್ಳಿ-ಯಲಹಂಕ-ದೇವನಹಳ್ಳಿ ಮೆಮು ರೈಲು ಸಂಚಾರ ರದ್ದಾಗಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular