ಬೆಂಗಳೂರು: ನೀವು ಚಿನ್ನ ಖರೀದಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಸೂಪರ್ ಸುದ್ದಿ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಸತತ ಎರಡು ವಹಿವಾಟುಗಳಲ್ಲಿ ಚಿನ್ನದ ಬೆಲೆಯು ಭಾರಿ ಇಳಿಕೆ ಕಂಡಿದೆ. ಕಳೆದ ಶನಿವಾರದ ವಹಿವಾಟಿನಲ್ಲಿ ಬೆಲೆ ತಗ್ಗಿದ ಬೆನ್ನಲ್ಲೇ, ವಾರದ ಮೊದಲ ದಿನವಾದ ಇಂದೂ (ಸೋಮವಾರ) ಕೂಡ ಬಂಗಾರ ಇಳಿಕೆಯತ್ತ ಮುಖಮಾಡಿದೆ. ಮಾರುಕಟ್ಟೆಯ ಲೆಕ್ಕಾಚಾರದ ಪ್ರಕಾರ, ಕಳೆದ 6 ವಹಿವಾಟುಗಳಲ್ಲಿ ಬರೋಬ್ಬರಿ 4 ವಹಿವಾಟುಗಳಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಇಳಿಮುಖ ದಾಖಲಿಸಿದೆ.
ಬೆಲೆ ಇಳಿಕೆಗೆ ಜಾಗತಿಕ ಯುದ್ಧದ ಭೀತಿಯೇ ಕಾರಣ
ಜಾಗತಿಕವಾಗಿ ಅಮೆರಿಕ ಮತ್ತು ಇರಾನ್ ನಡುವೆ ದಾಳಿ, ಪ್ರತಿದಾಳಿಗಳು ನಡೆಯುತ್ತಿದ್ದು ಸಂಘರ್ಷ ತಾರಕಕ್ಕೇರಿದೆ. ಇದರ ನಡುವೆ ಜಾಗತಿಕ ತೈಲ ಸಾಗಣೆಯ ಪ್ರಮುಖ ಕೊಂಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ದೇಶವು ಮತ್ತೆ ಮುಚ್ಚಿದೆ. ಇದರ ನೇರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಏರುಮುಖವಾಗಿದ್ದು, ಹೂಡಿಕೆದಾರರ ಲೆಕ್ಕಾಚಾರ ಬದಲಾಗಿದೆ. ಈ ಜಾಗತಿಕ ವಿದ್ಯಮಾನವೇ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಗಣನೀಯವಾಗಿ ಇಳಿಯಲು ಪ್ರಮುಖ ಕಾರಣವಾಗಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಇಂದಿನ (ಜುಲೈ 13) ಚಿನ್ನ ಮತ್ತು ಬೆಳ್ಳಿ ದರಗಳ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ:
24 ಕ್ಯಾರೆಟ್ ಅಪ್ಪಟ ಚಿನ್ನದ ದರ (ಶುದ್ಧ ಚಿನ್ನ):
ಶುದ್ಧ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 142 ರೂ. ಇಳಿಕೆ ಆಗಿದ್ದು, ಇಂದಿನ ದರ 14,291 ರೂ. ದಾಖಲಾಗಿದೆ. ಇನ್ನು 10 ಗ್ರಾಂ (ಒಂದು ತೊಲ) ಬೆಲೆಯಲ್ಲಿ ಬರೋಬ್ಬರಿ 1,420 ರೂ. ಇಳಿಕೆಯಾಗಿದ್ದು, ಇಂದಿನ ಮಾರುಕಟ್ಟೆ ದರ 1,42,910 ರೂಪಾಯಿಗೆ ಬಂದು ತಲುಪಿದೆ.
22 ಕ್ಯಾರೆಟ್ ಒಡವೆ ಚಿನ್ನದ ದರ:
ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಗ್ರಾಹಕರಿಗೆ ನಿರಾಳ ಸಿಕ್ಕಿದೆ. 1 ಗ್ರಾಂ ಬೆಲೆಯಲ್ಲಿ 130 ರೂ. ಇಳಿಕೆಯಾಗಿದ್ದು, ಇಂದಿನ ದರ 13,100 ರೂ. ಆಗಿದೆ. ಹಾಗೆಯೇ 10 ಗ್ರಾಂ ಒಡವೆ ಚಿನ್ನದ ಬೆಲೆ 1,300 ರೂ. ಇಳಿಕೆಯಾಗಿ, ಈಗ 1,31,000 ರೂಪಾಯಿ ದಾಖಲಾಗಿದೆ.
18 ಕ್ಯಾರೆಟ್ ಚಿನ್ನದ ದರ:
1 ಗ್ರಾಂ ಬೆಲೆ: 10,718 ರೂ.
10 ಗ್ರಾಂ ಬೆಲೆ: 1,07,180 ರೂ.
ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ
ಕಳೆದ ಎರಡು ವಹಿವಾಟುಗಳಿಂದ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಇಂದು ಬೆಳ್ಳಿ ಬೆಲೆ ಸಂಪೂರ್ಣ ತಟಸ್ಥವಾಗಿದ್ದು (ಸ್ಥಿರವಾಗಿದೆ), ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿ ದರ 235 ರೂ. ಇದ್ದು, 1 ಕೆಜಿ ಬೆಳ್ಳಿಯ ಬೆಲೆ 2,35,000 ರೂಪಾಯಿ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿರುವುದು ಮದುವೆ ಸೀಸನ್ ಹಾಗೂ ಹಬ್ಬದ ಶಾಪಿಂಗ್ ಮಾಡುವ ಗ್ರಾಹಕರಲ್ಲಿ ಸಣ್ಣದೊಂದು ಸಮಾಧಾನ ತಂದಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,42,910
ನಾಗ್ಪುರ ₹1,42,910
ಮುಂಬೈ ₹1,42,910
ಚೆನ್ನೈ ₹1,44,000
ಕೋಲ್ಕತ್ತಾ ₹1,42,910
ಪಾಟ್ನಾ ₹1,42,960
ಸೂರತ್ ₹1,42,960
ಚಂಡೀಗಢ ₹1,43,060
ಲಕ್ನೋ ₹1,43,060

