HomeKarnatakaಮಟನ್ ಶಾಪ್ ನಲ್ಲಿ ಡ್ರಗ್ಸ್ ಡೀಲಿಂಗ್: ಇಬ್ಬರು ಅರೆಸ್ಟ್

ಮಟನ್ ಶಾಪ್ ನಲ್ಲಿ ಡ್ರಗ್ಸ್ ಡೀಲಿಂಗ್: ಇಬ್ಬರು ಅರೆಸ್ಟ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಮಟನ್ ಶಾಪ್‌ವೊಂದರಲ್ಲಿ ಡ್ರಗ್ಸ್ ಡೀಲಿಂಗ್ ನಡೆಯುತ್ತಿದ್ದ ಬಗ್ಗೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಡ್ರಗ್ಸ್ ಡೀಲಿಂಗ್ ಹಾಗೂ ಮಾರಾಟ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮಟನ್ ಶಾಪ್ ವೊಂದರಲ್ಲಿ ಅಕ್ರಮವಾಗಿ ಡ್ರಗ್ಸ್ ದಂಧೆ ನಡೆಯುತ್ತಿತ್ತು. ಎಂಡಿಎಂಎ ಮಾದಕ ವಸ್ತುವಿನ ಮಾರಾಟ ಮಾಡುತ್ತಿದ ಜಾಲವನ್ನು ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜುನೈದ್ ಪಾಷಾ ಮತ್ತು ರಿಜ್ವಾನ್ ಬೇಗ್ ಬಂಧಿತ ಆರೋಪಿಗಳು. ಪೊಲೀಸರ ತನಿಖೆಯ ಪ್ರಕಾರ, ಈ ಆರೋಪಿಗಳು ನೈಜೀರಿಯಾ ಪ್ರಜೆಯೊಬ್ಬರಿಂದ ಡ್ರಗ್ಸ್ ಅನ್ನು ತರಿಸಿಕೊಂಡು ಮಟನ್ ಶಾಪ್‌ ಅನ್ನು ಮಾರಾಟದ ತಾಣವನ್ನಾಗಿ ಮಾಡಿಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ವಿದ್ಯಾರಣ್ಯಪುರ ಪೊಲೀಸರು, ಆರೋಪಿಗಳಿಂದ ಬರೋಬ್ಬರಿ 10 ಲಕ್ಷದ 60 ಸಾವಿರ ರೂಪಾಯಿ ಮೌಲ್ಯದ 106 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಇದರ ಜೊತೆಗೆ, ಎರಡು ಮೊಬೈಲ್ ಫೋನ್‌ಗಳು, 2,590 ರೂಪಾಯಿ ನಗದು ಮತ್ತು ಒಂದು ದ್ವಿಚಕ್ರ ವಾಹನವನ್ನು ಸಹ ಜಪ್ತಿ ಮಾಡಲಾಗಿದೆ.

ಡ್ರಗ್ಸ್ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪಗಳ ನಡುವೆ, ಸಣ್ಣ ಅಂಗಡಿಗಳನ್ನೂ ಸಹ ಮಾದಕ ವಸ್ತು ಮಾರಾಟಕ್ಕೆ ಬಳಸಿಕೊಳ್ಳುತ್ತಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಆತಂಕ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular