ಮನೆ ಮಹಡಿ ಮೇಲೆ ಗಾಂಜಾ ಗಿಡ ಬೆಳೆದ ದಂಪತಿ ಅರೆಸ್ಟ್

ಬೆಂಗಳೂರು: ಮನೆಯ ಮಹಡಿ ಮೇಲೆ ಗಾಂಜಾ ಗಿಡಗಳನ್ನು ಬೆಳೆಸಿದ್ದ ದಂಪತಿಯನ್ನು ಸದಾಶಿವನಗರ ಠಾಣೆ ಪೋಲೀಸರು ಬಂಧಿಸಿ ಬಳಿಕ ಜಾಮಿನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಸದಾಶಿವನಗರದ ಎಂಎಸ್ಆರ್ ನಗರ ನಿವಾಸಿಗಳಾದ ಊರ್ಮಿಳಾ ಕುಮಾರಿ ಮತ್ತು ಸಾಗರ್ ದಂಪತಿ ಬಂಧನಕ್ಕೆ ಒಳಗಾದವರು. ಅವರ ಮನೆಯಿಂದ 54 ಗ್ರಾಂ ತೂಕದ ಗಾಂಜಾ ಗಿಡ ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡಿ ಜಾಣತಾಣದಲ್ಲಿ ಊರ್ಮಿಳಾ ಅಪ್ಲೋಡ್ ಮಾಡಿದ್ದರು.

ವಿಡಿಯೋದಲ್ಲಿ ಗಾಂಜಾ ಗಿಡ ನೋಡಿದ ಸ್ಥಳೀಯ ಯುವಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಮನೆಗೆ ಬಂದು ಪರಿಶೀಲಿಸಿದಾಗ ಹೂವಿನ ಕುಂಡದಲ್ಲಿದ್ದ ಗಾಂಜಾ ಗಿಡಗಳನ್ನು ದಂಪತಿ ಕಿತ್ತು ಬಿಸಾಕಿರುವುದು ಕಂಡುಬಂದಿತ್ತು.

ಆದರೆ ದಂಪತಿ ಗಾಂಜಾ ವ್ಯಸನಿಗಳಲ್ಲ, ಅಲಂಕಾರಿಕವಾಗಿ ಗಾಂಜಾ ಗಿಡ ಬೆಳೆಸಿರುವುದು ಗೊತ್ತಾಗಿದೆ. ಬಾಲ್ಕನಿಯಲ್ಲಿ ಹೂವಿನ ಗಿಡಗಳ ಜೊತೆಗೆ ಅಕ್ರಮವಾಗಿ ಅವರು ಗಾಂಜಾ ಬೆಳೆಸಿದ್ದರು. ಪೊಲೀಸರು ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಗಾಂಜಾ ಗಿಡಗಳನ್ನು ಕಿತ್ತು ಕಸದ ಬುಟ್ಟಿಗೆ ಎಸೆದಿದ್ದರು. ಈ ಬಗ್ಗೆ ಪರಿಶೀಲಿಸಿದ ನಂತರ ದಂಪತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read