HomeLatest NewsBIG NEWS: ಬೆಂಗಳೂರು ಏರ್ ಪೋರ್ಟ್ ನಲ್ಲಿ ವಾಮಾಚಾರದ ಪಾರ್ಸೆಲ್ ಪತ್ತೆ: ಕಂಗಾಲಾದ ಸಿಬ್ಬಂದಿಗಳು; ಕೆಲಸಕ್ಕೆ...

BIG NEWS: ಬೆಂಗಳೂರು ಏರ್ ಪೋರ್ಟ್ ನಲ್ಲಿ ವಾಮಾಚಾರದ ಪಾರ್ಸೆಲ್ ಪತ್ತೆ: ಕಂಗಾಲಾದ ಸಿಬ್ಬಂದಿಗಳು; ಕೆಲಸಕ್ಕೆ ಬರಲು ಹಿಂದೇಟು

ಬೆಂಗಳೂರು: ಹಲವು ಸಂದರ್ಭಗಳಲ್ಲಿ ರಸ್ತೆಗಳಲ್ಲಿ, ಕಚೇರಿ, ಹೋಟೆಲ್ ಗಳಲ್ಲಿ ವಾಮಾಚಾರ ಮಾಡಿದ ಕುರುಹುಗಳು ಪತ್ತೆಯಾಗಿದ್ದನ್ನು ಕಂಡಿದ್ದೇವೆ. ಆದರೆ ಲಕ್ಷಾಂತರ ಜನರು ಓಡಾಡುವ ರಾಜ್ಜ್ಯ ರಾಜಧಾನಿ ಬೆಂಗಳೂರು ಅಂತರಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಂಚೆ ಕಚೇರಿಗೆ ವಾಮಾಚಾರದ ಪಾರ್ಸೆಲ್ ಒಂದು ಬಂದಿದ್ದು, ಅದರಲ್ಲಿದ್ದ ವಸ್ತುಗಳನ್ನು ಕಂಡು ಸಿಬ್ಬಂದಿಗಳು ಬೆಚ್ಚಿ ಬಿದ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಪಾರ್ಸೆಲ್ ಒಂದು ಬಂದಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿಯು ಜನವರಿ 6ರಿಂದ 22ರ ನಡುವೆ ವಿಮಾನ ನಿಲ್ದಾಣದ ವಿವಿಧೆಡೆ ಓಡಾಡಿ, ಆಡಳಿತ ಮಂಡಳಿ ಕಚೇರಿ ವಿಳಾಸಕ್ಕೆ ಅಂಚೆ ಮೂಲಕ ಬಂದ ಪಾರ್ಸೆಲ್ ಕಳುಹಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಚೇರಿಗೆ ಬಂದ ಬಾಕ್ಸ್ ತೆರೆಯುತ್ತಿದ್ದಂತೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಪಾರ್ಸೆಲ್ ಒಳಗೆ ಮಹಿಳೆ ಮತ್ತು ಪುರುಷನ ಬೆತ್ತಲೆ ಫೋಟೋಗಳನ್ನು ಇಟ್ಟು, ಅದರ ಸುತ್ತಲೂ ಕೊಳೆತ ಟೊಮ್ಯಾಟೋ ಹಾಗೂ ಹೂವಿನ ಹಾರವನ್ನು ಹಾಕಲಾಗಿತ್ತು. ಅಲ್ಲದೆ ಹಾರದ ಮೇಲೆ ಕಬ್ಬಿಣದ ತುಂಡು ಹಾಗೂ ಟೂತ್‌ಪೇಸ್ಟ್ ಇಟ್ಟು ಪೂಜೆ ಮಾಡಿದ ರೀತಿಯಲ್ಲಿ ವಸ್ತುಗಳನ್ನು ಜೋಡಿಸಿ ಪಾರ್ಸೆಲ್ ಮಾಡಿರುವುದು ಕಂಡುಬಂದಿದೆ.

ಇದನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಕೆಲವರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಈ ವಿಚಿತ್ರ ಪಾರ್ಸೆಲ್ ಘಟನೆ ಹಿನ್ನೆಲೆ ಕೆಲ ಸಿಬ್ಬಂದಿ ಕೆಲಸಕ್ಕೆ ಬರಲೂ ಹಿಂಜರಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಐಎಬಿ ಸಿಬ್ಬಂದಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಆಧಾರಿಸಿ ಕೆಂಪೇಗಡ ಏರ್​ಪೋರ್ಟ್​ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪಾರ್ಸೆಲ್ ಕಳುಹಿಸಿದವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular