HomeKarnatakaBIG NEWS: ಬೆಂಗಳೂರಿನಲ್ಲಿ ಮೈ ಕೊರೆವ ಚಳಿಯೊಂದಿಗೆ ಮುಂಜಾನೆಯಿಂದಲೇ ಮಳೆ ಅಬ್ಬರ: ಮನೆಗಳಿಗೆ ನುಗ್ಗಿದ ನೀರು

BIG NEWS: ಬೆಂಗಳೂರಿನಲ್ಲಿ ಮೈ ಕೊರೆವ ಚಳಿಯೊಂದಿಗೆ ಮುಂಜಾನೆಯಿಂದಲೇ ಮಳೆ ಅಬ್ಬರ: ಮನೆಗಳಿಗೆ ನುಗ್ಗಿದ ನೀರು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಮೈ ಕೊರೆವ ಚಳಿ, ಮತ್ತೊಂದೆಡೆ ಮಳೆ ರಾಯನ ಅಬ್ಬರ ಜೋರಾಗಿದೆ.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆಗಳಲ್ಲಿ, ತಗ್ಗು ಪ್ರದೇಶಗಾಳಲ್ಲಿ ನೀರು ನಿಂತು ಅವಾಂತರಗಳು ಸೃಷ್ಟಿಯಾಗಿವೆ. ಮುಂಜಾನೆ ಐದು ಗಂಟೆಯಿಂದಲೇ ಆರಂಭವಾದ ತುಂತುರು ಮಳೆ ಬೆಳಗಾಗುತ್ತಿದ್ದಂತೆ ಜೋರಾಗಿ ಸುರಿಯಲಾರಂಭಿಸಿದೆ.

ಒಂದೆಡೆ ಶೀತಗಾಳಿ, ಮತ್ತೊಂದೆಡೆ ಮಳೆಯಿಂದಾಗಿ ವೀಕೆಂಡ್ ಖುಷಿಯನ್ನು ಹೊರಗಡೆ ಕಳಿಯಬೇಕೆಂದುಕೊಂಡವರಿಗೆ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಣವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್‌, ಟೌನ್ ಹಾಲ್, ಕಾರ್ಪೊರೇಷನ್, ರಿಚ್ ಮಂಡ್ ಸರ್ಕಲ್, ಶಾಂತಿನಗರ, ಲಾಲ್ ಬಾಬ್, ಹನುಮಂತನಗರ, ಕತ್ರಿಗುಪ್ಪೆ, ಚಾಮರಾಜಪೇಟೆ, ಗಿರಿನಗರ, ಶ್ರೀನಗರ, ಕೆ.ಆರ್ ಮಾರುಕಟ್ಟೆ, ಸ್ಯಾಟಲೈಟ್, ವಿಜಯನಗರ, ರಾಜಾಜಿನಗರ, ಆರ್.ರ್ ನಗರ, ಮೈಸೂರು ರೋಡ್ ಸೇರಿದಂತೆ ಹಲವೆಡೆ ಮಳೆಸುರಿಯುತ್ತಿದ್ದು, ಜನರ ದೈನಂದಿನ ಕೆಲಸ ಕಾರ್ಯಗಳಿಗೆ ಅಡ್ಡಿಯುಂಟಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನಲ್ಲಿ ಇಂದು ಮಾತ್ರವಲ್ಲ ನಾಳೆಯೂ ನಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

For Latest News Updates, Join Our Whatsapp Community🚩
RELATED ARTICLES

Most Popular