ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರ ಜೋರಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣಾರ್ಭಟಕೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಬೆಂಗಳೂರಿನ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ, ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ನೆಲಮಂಗಲದಲ್ಲಿ ಹೆದ್ದಾರಿಯೇ ನದಿಯಂತಾಗಿದ್ದು, ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ವಾಹನ್ ಸಂಚಾರ ಅಸಾಧ್ಯವಾಗಿದೆ. ಇಲ್ಲಿನ ಅಡಕಮಾರನಹಳ್ಲಿ ಬಳಿಯ ಜೈ ಟೆಂಪಲ್ ರಸ್ತೆ ನೀರಿನಲ್ಲಿ ಮುಳುಗಿದೆ.
ಶಾಂತಿನಗರದಲ್ಲಿ ಸಿಸಿಬಿ ಕಚೇರಿಗೆ ಮಳೆ ನೀರು ನುಗ್ಗಿದೆ. ಕಚೇರಿ ಆವರಣ ಕೆರೆಯಂತಾಗಿದೆ. ಸಿಸಿಬಿ ಕಚೇರಿಯ ಮುಂಭಾಗದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಡಬಲ್ ರೋಡ್ ನಲ್ಲಿ ಮೊಣಕಾಲುವರೆಗೆ ನೀರು ನಿಂತಿದೆ. ಶಾಂತಿನಗರದ ಡಿಪೋದಲ್ಲಿ ಬಿಎಂಟಿಸಿ ಬಸ್ ಗಳು ಭಗಶಃ ಮುಳುಗಡೆಯಾಗಿವೆ ಡಿಪೋ ಪೂರ್ತಿ ನೀರಿನಿಂದ ತುಂಬಿದೆ.
ರಾತ್ರಿ ಸುರಿದ ಧಾರಾಕಾರ ಮಳೆಗೆ ಈಜಿಪುರದಲ್ಲಂತೂ ಜನರು ಈಜಿಕೊಂಡೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದು, ಮೊಣಕಾಲುವರೆಗೆ ನಿಂತಿದೆ. ಮನೆಯಲ್ಲಿದ್ದ ಸೋಪಾ, ವಸ್ತುಗಳು, ಅಡುಗೆ ಸಾಮಾನುಗಳು ನೀರಿನಲ್ಲಿ ತೇಲುತ್ತಿವೆ. ಅಲ್ಲಿನ ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ಸಂಪಂಗಿ ರಾಮನಗರದಲ್ಲಿ ಎರಡು ಕಟ್ಟಡಗಳ ಬೇಸ್ ಮೆಂಟ್ ಗೆ ನೀರು ನುಗ್ಗಿದು, ಸಂಪೂರ್ಣ ಜಲಾವೃತಗೊಂಡಿದೆ. ಚರಂಡಿ ಸ್ವಚ್ಛಗೊಳಿಸದ ಕಾರಣ ಮನೆಗಳಿಗೆ ನೀರು ನುಗ್ಗಿದ್ದು ಜನರು ಹೈರಾಣಾಗಿದ್ದಾರೆ.
ಹೆಚ್ ಬಿ ಆರ್ ಲೇಔಟ್, ಟೆಲಿಕಾಲ್ ಲೇಔಟ್ ಕೆರೆಯಂತಾಗಿವೆ. ಕಂಟೀರವ ಸ್ಟೇಡಿಂಯಮ್ ನಲ್ಲಿ ನೀರು ನಿಂತಿದೆ.
ಒಂದೆಡೆ ನಿವಾಸಿಗಳು ಮನೆಗೆ ನುಗ್ಗಿದ ನೀರು ಹೊರಹಾಕಲು ಯತ್ನಿಸುತ್ತಿದ್ದರೆ ಮತ್ತೊಂದೆ ಕಚೇರಿಗಳಿಗೆ ತೆರಳುವವರಿಗೆ ಜಾಲವೃತಗೊಂಡಿರುವ ರಸ್ತೆ, ಟ್ರಾಫಿಕ್ ಜಾಮ್ ಸಮಸ್ಯೆಯಿಂದ ಪರದಾಡುವ ಸ್ಥಿತಿ ನಿರ್ಮಾನವಾಗಿದೆ.