HomeLatest NewsBIG NEWS: ಶಾಲಾ ಕಟ್ಟಡದಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

BIG NEWS: ಶಾಲಾ ಕಟ್ಟಡದಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಬೆಂಗಳೂರು: ಪತ್ನಿ ಹಣ ನೀಡಲು ನಿರಾಕರಿಸಿದಳು ಎಂಬ ಕಾರಣಕ್ಕೆ ಪತಿ ಮಹಾಶಯನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಮರಿಯಣ್ಣನಪಾಳ್ಯದಲ್ಲಿ ನಡೆದಿದೆ.

ತಮಿಳುನಾಡು ಮೂಲದ ರಾಜೇಂದ್ರ (48) ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಖಾಸಗಿ ಶಾಅಲೆಯ ಕಟ್ಟಡವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜೇಂದ್ರ ಶಾಲಾ ಕಟ್ಟಡದಲ್ಲಿ ಕಾಮಗಾರಿ ನಡೆಸುತ್ತಿದ್ದರು. ಪತ್ನಿಗೆ ಕರೆ ಮಾಡಿ 20 ಸಾವಿರ ಹಣಬೇಕು ಕೊಡು ಎಂದು ಕೇಳಿದ್ದರು. ಅದಕ್ಕೆ ಪತ್ನಿ ಕೊಡಲು ನಿರಾಕರಿಸಿದ್ದಾರೆ.

ಪತ್ನಿ ಹಣ ಕೊಟ್ಟಿಲ್ಲ ಎಂದು ನೊಂದು ಶಾಲೆಯ ಕಟ್ಟಡದಲ್ಲೇ ರಾಜೇಂದ್ರ ನೇಣಿಗೆ ಕೊರಳೊದ್ದಿದ್ದಾರೆ. ಪ್ರತಿದಿನದಂತೆ ಶಾಲೆಗೆ ಇಸ್ಕಾನ್ ನಿಂದ ಊಟ ಬಂದಿತ್ತು. ಮಧ್ಯಾಹ್ನ ಊಟವಿಡಲೆಂದು ವಿದ್ಯಾರ್ಥಿಗಳು ಶಾಲೆಯ ಪಕ್ಕದ ಕಟ್ಟಡಕ್ಕೆ ತೆರಳಿದ್ದಾಗ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿಯನ್ನು ಕಂಡು ಆತಂಕಗೊಂಡಿದ್ದಾರೆ. ತಕ್ಷಣ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular