ಎಸ್ ಯುವಿ ಕಾರಿನಲ್ಲಿ ಬಂದು ರಸ್ತೆಬದಿ ಕಸ ಸುರಿದು ಹೋದ ಯುವಕರು: 5000 ರೂಪಾಯಿ ದಂಡ ವಿಧಿಸಿದ ಅಧಿಕಾರಿಗಳು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಖಾಲಿ ಜಾಗಗಳಲ್ಲಿ, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ರಾರಾಜಿಸುತ್ತಿರುವುದು ಮುಂದುವರೆದಿದೆ.

ಎಸ್ ಯುವಿ ಕಾರಿನಲ್ಲಿ ಮೂಟೆಗಟ್ಟಲೆ ಕಸ ತೆಗೆದುಕೊಂಡು ಬಂದ ಯುವಕರು ರಸ್ತೆ ಬದಿ ಸುರಿದು ಹೋಗಿರುವ ಘಟನೆ ಬೆಂಗಳೂರಿನ ಸರ್ವಜ್ಞನಗರದಲ್ಲಿ ನಡೆದಿದೆ. ರಸ್ತೆ ಬದಿ ರಾಶಿ ರಾಶಿ ಕಸ ಸುರಿದು ಹೋಗಿದ್ದವರನ್ನು ಟ್ರಾಫಿಕ್ ಪೊಲೀಸರ ಸಹಾಯದಿಂದ ಪತ್ತೆ ಮಾಡಿದ ಜಿಬಿಎ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಸರ್ವಜ್ಞನಗರದ ರಸ್ತೆ ಬದಿ ಕಾರಲ್ಲಿ ಬಂದು ಕಸ ಸುರಿದು ಹೋಗಿದ್ದವರನ್ನು ಪತ್ತೆ ಮಾಡಿರುವ ಹೆಲ್ತ್ ಇನ್ಸ್ ಪೆಕ್ಟರ್ ಸಂದೀಪ್ ಹಾಗೂ ಇತರ ಸಿಬ್ಬಂದಿಗಳು ಕಸ ಸುರಿದವರಿಗೆ 5000 ರೂಪಾಯಿ ದಂಡ ವಿಧಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read