ಬೆಂಗಳೂರು: ಡ್ರಗ್ಸ್ ವಿರುದ್ಧ ಸಮರ ಮುಂದುವರೆಸಿರುವ ಪೊಲೀಸರು ಸಾರ್ವಜನಿಕರಿಗೆ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಲೇಬಿರಿಯಾ ಮೂಲದ ಕೌಂಡ್ ಪ್ರಿನ್ಸ್ ಬಂಧಿತ ಆರೋಪಿ. ಆವಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಕಮ್ಮಸಂದ್ರ ವ್ಯಾಪ್ತಿಯಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ.
ಬಂಧಿತನಿಂದ 1.6 ಕೋಟಿ ಮೌಲ್ಯದ ಎಂಡಿಏಮೆ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಒಂದು ತಿಂಗಳ ಹಿಂದಷ್ಟೇ ಬಿಸಿನೆಸ್ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದ. ದೆಹಲಿ ಮೂಲದ ಪೆಡ್ಲರ್ ಜೊತೆ ಸೇರಿ ಡ್ರಗ್ಸ್ ಡೀಲ್ ಮಾಡುತ್ತಿದ್ದ. ಬಳಿಕ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ. ಡ್ರಗ್ಸ್ ಮಾರಾಟ ಮಾಡುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
