ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಧೀಕೃತವಾಗಿ ಇಕ್ಕಟ್ಟಿನ ಸ್ಥಳದಲ್ಲಿ ಆಕಾಶದೆತ್ತರಕೆ ತಲೆ ಎತ್ತಿರುವ ಕಟ್ಟಡಗಳು ಒಂದು ಭಾಗದಲ್ಲಿ ವಾಲಿ ಆತಂಕ ಸೃಷ್ಟಿಸುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾತ್ರಿ ಬೆಳಗಾಗುವಷ್ಟರಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಪಕ್ಕಕ್ಕೆ ವಾಲಿದ್ದು ನಿವಾಸಿಗಳಲ್ಲಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ನೆಲಮಂಗಲ ಬಳಿಯ ಮಾದಾವಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾದನಾಯಕನಹಳ್ಳಿ ಗಾರೆ ಸೀನಪ್ಪ ಎಂಬುವವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ವಾಲಿದ್ದು, ಎರಡು ವರ್ಷಗಳ ಹಿಂದಷ್ಟೇ ಕಟ್ಟಿದ್ದ ಮನೆ ಇದೀಗ ಕುಸಿದು ಬೀಳುವ ಹಂತ ತಲುಪಿದೆ.
ಈ ಮನೆಯಲ್ಲಿ ಬಾಡಿಗೆದಾರರು ವಾಸವಾಗಿದ್ದರು. ಕಟ್ಟಡ ವಾಲಿದ್ದರಿಂದ ಗಡಿಬಿಡಿಯಲ್ಲಿ ಮನೆ ಖಾಲಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.