HomeLatest NewsBIG NEWS: ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಳೆಯಿಂದ ಬೆಂಗಳೂರು-ಬೀದರ್ ಗೆ ವಿಶೇಷ ರೈಲು ಸಂಚಾರ ಆರಂಭ

BIG NEWS: ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಳೆಯಿಂದ ಬೆಂಗಳೂರು-ಬೀದರ್ ಗೆ ವಿಶೇಷ ರೈಲು ಸಂಚಾರ ಆರಂಭ

ಬೆಂಗಳೂರು: ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ನಾಳೆಯಿಂದ ಬೆಂಗಳೂರು-ಬೀದರ್ ಗೆ ವಿಶೇಷ ರೈಲು ಸಂಚಾರ ಆರಂಭವಾಗಲಿದೆ.

ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಬೆಂಗಳೂರು ಹಾಗೂ ಬೀದರ್ ನಡುವೆ ವಾರಾಂತ್ಯ ಹೆಚ್ಚುವರಿ ರೈಲನ್ನು ಓಡಿಸಲು ಇಲಾಖೆ ನಿರ್ಧರಿಸಿದೆ. ಬೆಂಗಳೂರು ಹಾಗೂ ಬೀದರ್ ನಡುವೆ ಜೂನ್ 15 ರಿಂದ ತಿಂಗಳಾಂತ್ಯದ 29 ರವರೆಗೂ ವಿಶೇಷ ರೈಲುಗಳು ಸಂಚರಿಸಲಿವೆ.

ರೈಲುಗಳ ಹೊಸ ವೇಳಾಪಟ್ಟಿ ಹೀಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಸಂಖ್ಯೆ 06539 SMVT ಬೆಂಗಳೂರು-ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಜೂನ್ 15 ರಿಂದ 29 ರವರೆಗೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಸಂಚರಿಸುತ್ತದೆ. ಇದು ಒಟ್ಟು ಐದು ಬಾರಿ ಸಂಚರಿಸಲಿದೆ.
ರೈಲು ಸಂಖ್ಯೆ 06540 ಬೀದರ್-SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಜೂನ್ 16 ರಿಂದ 30 ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರ ಸಂಚರಿಸುತ್ತದೆ. ಇದು ಐದು ಬಾರಿ ಸಂಚಾರ ಮಾಡಲಿದೆ.
ರೈಲು ಸಂಖ್ಯೆ 06539 ಬೆಂಗಳೂರು-ಬೀದರ್ ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ರಾತ್ರಿ 9.15ಕ್ಕೆ ಹೊರಡುತ್ತದೆ. ಮರುದಿನ ಬೆಳಗ್ಗೆ 11.30ಕ್ಕೆ ಬೀದರ್ ತಲುಪುತ್ತದೆ ಎಂದು ಪ್ರಕಟಣೆಯಲ್ಲಿ ದಕ್ಷಿಣ ರೈಲು ವಿಭಾಗ ತಿಳಿಸಿದೆ.

ತಿರುಗಿ ಬರುವಾಗ, ರೈಲು ಸಂಖ್ಯೆ 06540 ಬೀದರ್- ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು , ಬೀದರ್‌ನಿಂದ ರಾತ್ರಿ 1 ಗಂಟೆಗೆ ಹೊರಡುತ್ತದೆ. ಮರುದಿನ ಬೆಳಿಗ್ಗೆ 4 ಗಂಟೆಗೆ ಬೆಂಗಳೂರು ತಲುಪುತ್ತದೆ.

ಈ ರೈಲುಗಳು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರಸ್ತೆ, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ ಮತ್ತು ಹುಮ್ನಾಬಾದ್‌ನಲ್ಲಿ ನಿಲುಗಡೆಯಾಗಲಿವೆ. ಎರಡೂ ದಿಕ್ಕುಗಳಲ್ಲಿ ಈ ನಿಲ್ದಾಣಗಳಲ್ಲಿ ರೈಲು ನಿಲ್ಲುತ್ತದೆ.

ರೈಲು ಸಂಖ್ಯೆ 06539 ಮತ್ತು ರೈಲು ಸಂಖ್ಯೆ 06540 ಎರಡೂ ಪ್ರಾರಂಭಿಕ ನಿಲ್ದಾಣಗಳಿಂದ ತಲಾ 5 ಟ್ರಿಪ್‌ಗಳನ್ನು ನಿರ್ವಹಿಸಲಿವೆ. ಪ್ರಯಾಣಿಕರು ಈ ವಿಶೇಷ ರೈಲುಗಳ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular