HomeKarnatakaBIG NEWS: ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್; ಓರ್ವ ಆರೋಪಿ ಅರೆಸ್ಟ್; ಮೂವರಿಗಾಗಿ ಮುಂದುವರಿದ ಶೋಧ

BIG NEWS: ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್; ಓರ್ವ ಆರೋಪಿ ಅರೆಸ್ಟ್; ಮೂವರಿಗಾಗಿ ಮುಂದುವರಿದ ಶೋಧ

ಬಳ್ಳಾರಿ: ಬಿ.ಕಾಂ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ನವೀನ್ ಬಂಧಿತ ಆರೋಪಿ. ತಲೆಮರೆಸಿಕೊಂಡಿರುವ ಮಹಮ್ಮದ್ ಸಾಕಿಬ್, ತನುಗೌಡ ಹಾಗೂ ನಾಲ್ಕನೇ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಲ್ಲಾ ಆರೋಪಿಗಳು ಬಳ್ಳಾರಿ ನಗರದ ಕೌಲ್ ಬಜಾರ್ ನಿವಾಸಿಗಳು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮುಖ ಆರೋಪಿ ನವೀನ್ ವಿದ್ಯಾರ್ಥಿನಿಯ ಸ್ನೇಹಿತನಾಗಿದ್ದಾನೆ. ಬಳ್ಳಾರಿ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಅ.14ರಂದು ಬೆಳಿಗ್ಗೆ ನಿನ್ನ ಅಣ್ಣ ಬಂದಿದ್ದಾನೆ, ಕರೆಯುತ್ತಿದ್ದಾನೆ ಎಂದು ಹೇಳಿ ಕಾಲೇಜಿನಿಂದ ಹೊರಗೆ ಕರೆಸಿಕೊಂಡ ಕಾಮುಕರು ಯುವತಿಯನ್ನು ಆಟೋದಲ್ಲಿ ಕಿಡ್ನ್ಯಾಪ್ ಮಾಡಿ ಕೊಪ್ಪಳಕ್ಕೆ ಕರೆದೊಯ್ದಿದ್ದರು. ಬಲವಂತದಿಂದ ಯುವತಿಗೆ ಬೀಯರ್ ಕುಡಿಸಿ ಹೋಟೆಲ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular