HomeKarnatakaBREAKING NEWS: ಕೆಎಂಎಫ್ ಕಚೇರಿ ಮುಂದೆ ವಾಮಾಚಾರ!

BREAKING NEWS: ಕೆಎಂಎಫ್ ಕಚೇರಿ ಮುಂದೆ ವಾಮಾಚಾರ!

ಬಳ್ಳಾರಿ: ಬಳ್ಳಾರಿಯ ಕೆಎಂಎಫ್ ಕಚೇರಿ ಮುಂದೆಯೇ ವಾಮಾಚಾರ ನಡೆಸಿರುವ ಘಟನೆ ನಡೆದಿದೆ. ಕೆಎಂಎಫ್ ಆಡಳಿತ ಕಚೇರಿ ಮುಂಭಾಗವೇ ನಿಂಬೆಹಣ್ಣು, ಕುಂಕುಮ, ಕುಂಬಳಕಾಯಿ, ಮಣ್ಣಿನ ಮಡಿಕೆ ಮೊದಲಾದ ವಸ್ತುಗಳನ್ನು ಇಟ್ಟು ಮಾಟ-ಮಂತ್ರ ಮಾಡಲಾಗಿದೆ.

ಈಗಾಗಲೇ ನಷ್ಟದ ಸಮಸ್ಯೆಗೆ ಸಿಲುಕಿರುವ ಬಳ್ಳಾರಿ ಕೆಎಂಎಫ್ ನಲ್ಲಿ ಆಂತರಿಕ ಕಲಹ ಶುರುವಾಗಿದೆ. ಈ ನಡುವೆಯೇ ಕೆಎಂಎಫ್ ಕಚೇರಿ ಮುಂಭಾಗ ವಾಮಾಚರದ ಘಟನೆ ನಡೆದಿದ್ದು, ಆಂತರಿಕ ವೈಮನಸ್ಸು ಇದ್ದವರೇ ಹೀಗೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಚೇರಿ ಮುಂಬಾಗ ಮಣ್ಣಿನ ಮಡಿಕೆ, ತಾಯತ, ಗೊಂಬೆ, 8 ನಿಂಬೆಹಣ್ಣು, ಕುಂಬಳ ಕಾಯಿಗೆ ಬಣ್ಣದ ದಾರ ಕಟ್ಟಿ ಮಾಟ-ಮಂತ್ರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular