HomeKarnatakaBIG NEWS: ಬೆಂಗಳೂರು ಬಳಿಕ ಬೆಳಗಾವಿಯಲ್ಲಿಯೂ ಹಾಡ ಹಗಲೇ ಕಳ್ಳರ ಅಟ್ಟಹಾಸ; ಮಾಲೀಕನಿಗೆ ಗನ್ ನಿಂದ...

BIG NEWS: ಬೆಂಗಳೂರು ಬಳಿಕ ಬೆಳಗಾವಿಯಲ್ಲಿಯೂ ಹಾಡ ಹಗಲೇ ಕಳ್ಳರ ಅಟ್ಟಹಾಸ; ಮಾಲೀಕನಿಗೆ ಗನ್ ನಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನ

ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ರಾಜಧಾನಿ ಬೆಂಗಳೂರಿನಲ್ಲಿ ಹಾಡ ಹಗಲೇ ದುಷ್ಕರ್ಮಿಗಳ ಗ್ಯಾಂಗ್ ಚಿನ್ನದಂಗಡಿಗೆ ನುಗ್ಗಿ ಗುಂಡಿನ ದಾಳಿ ನಡೆಸಿ ಕೆ.ಜಿಗಟ್ಟಲೇ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಕುಂದಾನಗರಿ ಬೆಳಗಾವಿಯಲ್ಲಿಯೂ ಇಂತದ್ದೇ ಘಟನೆ ನಡೆದಿದೆ.

ಬೈಕ್ ನಲ್ಲಿ ಬಂದ ಕಳ್ಳರು ಚಿನ್ನದಂಗಡಿ ಮಾಲೀಕನ ಮೇಲೆ ಗನ್ ನಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿರುವ ಘಟನೆ ಬೆಳಗಾವಿಯ ಶಾಹು ನಗರದ ಸಂತೋಷಿ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿನ್ನದಂಗಡಿ ಮಾಲೀಕ ಪ್ರಶಾಂತ್ ಹೋಂಡ್ರಾ ಎಂದಿನಂತೆ ಇಂದು ಬೆಳಿಗ್ಗೆ ತಮ್ಮ ಅಂಗಡಿ ಬಾಗಿಲು ತೆರೆದಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಹಿಂದಿನಿಂದ ಬಂದು ಮಾಲೀಕನ ತಲೆಗೆ ಗನ್ ಹಿಡಿದು ಅಂಗಡಿ ಒಳಗೆ ನುಗ್ಗಿದ್ದಾರೆ. ಗನ್ ನಿಂದ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ವೇಳೆ ಮಾಲೀಕ ಪ್ರಶಾಂತ್ ಜೋರಾಗಿ ಕಿರುಚಿಕೊಂಡಿದ್ದಾರೆ. ಅವರ ಕೂಗಾಟ ಕೇಳಿ ಅಂಗಡಿ ಅಕ್ಕಪಕ್ಕದ ಜನರು ಬರುವುದನ್ನು ಗಮನಿಸಿದ ಕಳ್ಳರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ.

ಓರ್ವ ಕಳ್ಳ ಹೆಲ್ಮೆಟ್ ಧರಿಸಿ ಬಂದಿದ್ದರೆ ಇನ್ನೋರ್ವ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಗನ್ ಹಿಡಿದು ಬಂದು ಕೃತ್ಯವೆಸಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಿನ್ನದಂಗಡಿ ಮಾಲೀಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular