HomeKarnatakaBREAKING: ಆಟವಾಡುತ್ತ ನೀರಿನ ಸಂಪ್ ಗೆ ಬಿದ್ದು ಮಗು ದುರ್ಮರಣ

BREAKING: ಆಟವಾಡುತ್ತ ನೀರಿನ ಸಂಪ್ ಗೆ ಬಿದ್ದು ಮಗು ದುರ್ಮರಣ

ಬೆಳಗಾವಿ: ನೀರಿನ ಸಂಪ್ ಗೆ ಬಿದ್ದು ಮತ್ತೊಂದು ಮಗು ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆಟವಾಡುತ್ತಾ ನೀರಿನ ಸಂಪ್ ಗೆ ಬಿದ್ದಿದ್ದ ಮಗು ಮೃತಪಟ್ಟಿದೆ.

ಬೆಳಗಾವಿಯ ಕಂಗ್ರಾಳ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಸಾಯಿಶಾ ಸಂದೀಪ್ ಬಡವನಾಚೆ ಮೃತ ಮಗು. ಆಟವಾಡುತ್ತಿದ್ದ ಮಗು ಏಕಾಏಕಿ ಕಾಣದಿದ್ದಾಗ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಬಳಿಕ ಅನುಮಾನಗೊಂಡು ನೀರಿನ ಸಂಪ್ ನೋಡಿದಾಗ ಮಗು ನೀರಿಗೆ ಬಿದ್ದಿರುವುದು ಕಂಡುಬದಿದೆ. ಸಂಪ್ ಗೆ ಬಿದ್ದ ಮಗು ಸಾವನ್ನಪ್ಪಿದೆ.

ಬೆಳಗಾವಿ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular