HomeLatest NewsBREAKING: ಅತ್ಯಾಚಾರ, ದರೋಡೆ ಗ್ಯಾಂಗ್ ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಪೊಲೀಸರು

BREAKING: ಅತ್ಯಾಚಾರ, ದರೋಡೆ ಗ್ಯಾಂಗ್ ಆರೋಪಿ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ ಪೊಲೀಸರು

ಬೆಳಗಾವಿ: ಅತ್ಯಾಚಾರ, ದರೋಡೆ ಗ್ಯಾಂಗ್ ಆರೋಪಿ ಕಾಲಿಗೆ ಪೊಲೀಸರು ಗುಂಡೇಟು ಹೊಡೆದು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಆರೋಪಿ ರಮೇಶ್ ಕಿಲ್ಲಾರ್ ಕಾಲಿಗೆ ಕಿತ್ತೂರು ಠಾಣೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಕಾನ್ಸ್ ಟೇಬಲ್ ಶರೀಫ್ ಎಂಬುವವರಿಗೆ ಚಾಕು ಇರಿದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಪ್ರವೀಣ್ ಗೊಂಗೊಳ್ಳಿ ಫೈರಿಂಗ್ ನಡೆಸಿದ್ದಾರೆ. ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ರಮೇಶ್ ಕಿಲ್ಲಾರ್ ಹಾಗೂ ಗಾಯಾಳು ಪಿಸಿ ಇಬ್ಬರನ್ನೂ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular