ಬೆಳಗಾವಿ: ಅಪ್ರಾಪ್ತರಿಂದ ಬೈಕ್ ಸಂಚಾರ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಬೆಳಗಾವಿ ನಗರ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಶಾಲೆ-ಕಾಲೇಜುಗಳಿಗೆ ಬೈಕ್, ಸ್ಕೂಟರ್ ಗಳಲ್ಲಿ ಬರುತ್ತಿದ್ದ ಅಪ್ರಾಪ್ತರ ವಿರುದ್ಧ ಒಂದೇ ದಿನ 9 ಪ್ರಕರಣ ದಾಖಲಾಗಿದೆ. ಬೆಳಗಾವಿ ನಗರ ಮರಾಠಾ ಮಂಡಳ ಕಾಲೇಜು, ಎಸ್.ಎಸ್.ಎಸ್ ಸಮಿತಿ ಕಾಲೇಜು, ವಿಜಯಾ ಪ್ಯಾರಾ ಮೆಡಿಕಲ್ ಕಾಲೇಜು, ಗುಡ್ ಷಫರ್ಡ್ ಹಾಗೂ ಪೋದ್ದಾರ್ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಿಸಲಾಗಿದ್ದು, ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
ವಾಹನ ಚಲಾಯಿಸುವ ಮಕ್ಕಳು ಮಾತ್ರವಲ್ಲ, ಪೋಷಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಬೆಳಗಾವಿ ಪೊಲೀಸ್ ಆಯುಕ್ತ ಭೂಷನ್ ಬೊರಸೆ ತಿಳಿಸಿದ್ದಾರೆ.