ಬೆಳಗಾವಿ: 5 ವರ್ಷದ ಬಾಲಕಿ ಮೇಲೆ ಮೌಲ್ವಿಯೋರ್ವ ಮಸೀದಿಯಲ್ಲಿ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದಿದೆ.
ಸಂತ್ರಸ್ತ ಬಾಲಕಿ ಪೋಷಕರು ನೀಡಿರುವ ದೂರಿನ ಮೇರೆಗೆ ಆರೋಪಿ ಮೌಲ್ವಿ ತುಫೇಲ್ ಅಹ್ಮದ್ (22) ನನ್ನು ಬಂಧಿಸಲಾಗಿದೆ. ಮುರಗೋಡ ಠಾಣೆ ಪೊಲೀಸರು ಮೌಲ್ವಿಯನ್ನು ಬಂಧಿಸಿ ಹಿಂಡಲಾಗಾ ಜೈಲಿಗಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರ ನಡೆಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿತ್ತು.
ಬಾಲಕಿ ಪೋಷಕರಿಗೆ ಮಸೀದಿಯವರು ಹೆದರಿಸಿ ಬೆದರಿಕೆಯೊಡ್ಡುತ್ತಿದ್ದ ಕಾರಣಕ್ಕೆ ಪೋಷಕರು ದೂರು ನೀಡದೇ ಸುಮ್ಮನಿದ್ದರು. ಪುನೀತ್ ಕೆರೆಹಳ್ಳಿ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿತ್ತು. ಯರಗಟ್ತಿ ಮಸೀದಿಯಲ್ಲಿ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರವೆಸಗಿದ್ದು, ಮಗುವಿನ ತಂದೆ ನ್ಯಾಯ ಕೇಳುತ್ತಿದ್ದಾರೆ. ಆದರೆ ಮಸೀದಿಯವರ ಬೆದರಿಕೆಯಿಂದ ದೂರು ನೀಡದೇ ಇದ್ದಾರೆ. ದಯವಿಟ್ಟು ನ್ಯಾಯಕೊಡಿಸುವಂತೆ ಮನವಿ ಮಾಡಲಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಬಾಲಕಿ ಪೋಷಕರನ್ನು ಪತ್ತೆಮಾಡಿ ದೂರು ನೀಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಆರೋಪಿ ಮೌಲ್ವಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.