HomeKarnatakaಮಹಿಳೆಯ ಫೋಟೋ ಸ್ಟೇಟಸ್ ಗೆ ಹಾಕಿದ ವ್ಯಕ್ತಿ: ಬರ್ಬರವಾಗಿ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ...

ಮಹಿಳೆಯ ಫೋಟೋ ಸ್ಟೇಟಸ್ ಗೆ ಹಾಕಿದ ವ್ಯಕ್ತಿ: ಬರ್ಬರವಾಗಿ ಹತ್ಯೆಗೈದು ಪೊಲೀಸ್ ಠಾಣೆಗೆ ಬಂದು ಶರಣಾದ ಪತಿ-ಪತ್ನಿ

ಬೆಳಗಾವಿ: ಸ್ಟೇಟಸ್ ಹಾಕಿದ್ದಕ್ಕೆ ಅನೈತಿಕ ಸಂಬಂಧದ ಶಂಕೆಯಿಂದ ವ್ಯಕ್ತಿಯೊಬ್ಬನನ್ನು ದಂಪತಿ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನಡೆದಿದೆ.

ಕಲ್ಲೋಳಿ ಗ್ರಾಮದ ಬನಪ್ಪ ಒಡೆಯರ್ ಮತ್ತು ಲಕ್ಷ್ಮೀ ಒಡೆಯರ್ ವ್ಯಕ್ತಿಯನ್ನು ಕೊಲೆಗೈದಿರುವ ಪತಿ-ಪತ್ನಿ. ಗುಜನಟ್ಟಿ ಗ್ರಾಮದ ರಮೇಶ್ ಬಂಟ್ರೋಳಿ ಎಂಬಾತನನ್ನು ಕೊಲೆ ಮಾಡಿದ್ದಾರೆ. ಕೊಲೆ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆಯಾದ ರಮೇಶ್ ಆರೋಪಿ ಬನಪ್ಪನ ಪತ್ನಿ ಲಕ್ಷ್ಮೀಯ ಫೋಟೋವನ್ನು ವಾಟ್ಸಪ್ ಶ್ಟೇಟಸ್ ಗೆ ಹಾಕಿದ್ದನಂತೆ. ರಮೇಶ್, ಲಕ್ಷ್ಮೀ ಜೊತೆ ಫೋಟೋ ತೆಗೆದುಕೊಂಡಿದ್ದ ಎನ್ನಲಾಗಿದೆ. ಇದನ್ನು ಕಂಡು ಆಕ್ರೋಶಗೊಂಡಿದ್ದ ಬನಪ್ಪ ಹಾಗೂ ಪತ್ನಿ ಲಕ್ಷ್ಮೀ ರಮೇಶನನ್ನು ಕೊಚ್ಚ್ಜಿ ಕೊಲೆ ಮಾಡಿದ್ದಾರೆ.

ಕಲ್ಲೋಳಿ ಗ್ರಾಮದಲ್ಲಿನ ಮನೆಯ ಹಿಂಬಾಗದಲ್ಲಿ, ಸೋಯಾಬಿನ್ ಬೆಳೆದಿದ್ದ ಜಮೀನಿನಲ್ಲೇ ಪತಿ ಮತ್ತು ಪತ್ನಿ ಸೇರಿ ರಮೇಶನನ್ನು ಕುಡುಗೋಲಿನಿಂದ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಕೊಲೆ ಮಾಡಿದ ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular