HomeLatest NewsBIG NEWS: ಸಾರ್ವಜನಿಕವಾಗಿ ಗುಂಡು ಹಾರಿಸಿ, ಕೈಯಲ್ಲಿ ಚಾಕು ಹಿಡಿದು ಹುಟ್ಟುಹಬ್ಬ ಆಚರಣೆ: ಗ್ರಾಮ ಪಂಚಾಯತ್...

BIG NEWS: ಸಾರ್ವಜನಿಕವಾಗಿ ಗುಂಡು ಹಾರಿಸಿ, ಕೈಯಲ್ಲಿ ಚಾಕು ಹಿಡಿದು ಹುಟ್ಟುಹಬ್ಬ ಆಚರಣೆ: ಗ್ರಾಮ ಪಂಚಾಯತ್ ಸದಸ್ಯ ಅರೆಸ್ಟ್!

ಬೆಳಗಾವಿ: ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಗೂಂಡಾವರ್ತನೆ ತೋರಿ ಹುಟ್ಟುಹಬ್ಬ ಆಚರಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

ಸಾರ್ವಜನಿಕವಾಗಿ ನಡುರಸ್ತೆಯಲ್ಲಿ ಗಾಳಿಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿ, ಕೈಯಲ್ಲಿ ಚಾಕು ಹಿಡಿದು ಬೆದರಿಕೆಯೊಡ್ಡುತ್ತಾ, ಹುಟ್ಟುಹಬ್ಬ ಆಚರಣೆ ಮಾಡಿದ್ದು, ಪಕ್ಕದಲ್ಲಿಯೇ ಪೊಲೀಸ್ ಠಾಣೆಯಿದ್ದರೂ ಯಾವ ಭಯವೂ ಇಲ್ಲದೇ ರಾಜಾರೋಷವಾಗಿ ಹುಚ್ಚಾಟ ಮೆರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡುಚಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯತ್ ಸದಸ್ಯ ಬಾಬುಜಾನ್ ಖಾಲಿಮುಂಡಾಸೈ ಎಂಬಾತ ಗೂಂಡಾ ವರ್ತನೆ ತೋರಿ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕುಡುಚಿ ಪೊಲೀಸರು ಬಾಬುಜಾನ್ ನನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular