ಬೆಳಗಾವಿ: ಶಾಲೆಗೆ ಸೇರಿದ್ದ ಮೊದಲ ದಿನ. ಅಕ್ಕನ ಜೊತೆ ಖುಷಿ ಖುಷಿಯಾಗಿ ಮೊದಲ ದಿನ ಶಾಲೆಗೆ ತೆರಳಿದ್ದ ಬಾಲಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗದ ಹೊರವಲಯದಲ್ಲಿ ನಿಪ್ಪಾಣಿ-ಮುಢೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಮುತ್ತುರಾಜ್ (5) ಮೃತ ಬಾಲಕ. ಬಾಲಕ ಹೆದ್ದಾರಿ ದಾಟುತ್ತಿದ್ದಾಗ ಮೊದಲು ಬೈಕ್ ವೊಂದು ಡಿಕ್ಕಿಹೊಡೆದಿದೆ. ಕೆಳಗೆ ಬಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಮತ್ತೊಂದು ವಾಹನ ಹರಿದು ಹೋಗಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ರಾಯಬಾಗ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.