HomeLatest Newsಒಂದೊಂದು ಕನಸಿನ ಹಿಂದಿದೆ ಒಂದೊಂದು ಗುಟ್ಟು

ಒಂದೊಂದು ಕನಸಿನ ಹಿಂದಿದೆ ಒಂದೊಂದು ಗುಟ್ಟು

ನಿಮಗೆ ಬೀಳುವ ಕನಸಿನ ಹಿಂದೆ ಒಂದೊಂದು ಗುಟ್ಟುಗಳು ಅಡಗಿರುತ್ತವೆ. ಕೆಲವು ಕನಸುಗಳನ್ನು ಶುಭ ಎಂದರೆ ಇನ್ನು ಕೆಲವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಅವುಗಳು ಹೇಗೆಂದಿರಾ..?

ದೇವರ ಕನಸು ಬಿದ್ದರೆ ಭವಿಷ್ಯದಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ ಎನ್ನಲಾಗುತ್ತದೆ. ದೇವರನ್ನು ನೀವು ಕನಸಲ್ಲಿ ಕಂಡರೆ ನಿಮಗೆ ಧನಲಾಭ ಆಗುವುದಂತೆ. ಅಪರಿಚಿತ ಕನ್ಯೆ ನೃತ್ಯ ಮಾಡುವುದು ನಿಮಗೆ ಕನಸಿನಲ್ಲಿ ಕಾಣಿಸಿದರೆ ಸಂಪತ್ತು ಹೆಚ್ಚುವುದು ಎನ್ನಲಾಗುತ್ತದೆ.

ಇನ್ನು ಬದುಕಿರುವವರು, ನಿಮಗೆ ಪರಿಚಿತರು ಯಾರಾದರೂ ಸತ್ತಂತೆ ಕನಸು ಬಿದ್ದರೆ, ಅವರ ಮೃತದೇಹವನ್ನು ನೀವು ಕನಸಿನಲ್ಲಿ ಕಂಡರೆ ಅವರ ಆಯಸ್ಸು ಹೆಚ್ಚುವುದಂತೆ. ಹಾಗಾಗಿ ಸತ್ತ ಕನಸು ಕಂಡರೆ ಇನ್ನು ಭಯ ಪಡಬೇಕಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ನೀರಿನಲ್ಲಿ ಮುಳುಗಿದ ಕನಸು ಬಿದ್ದರೆ ಅವರು ಪ್ರಯಾಣದ ವೇಳೆ ಸ್ವಲ್ಪ ಎಚ್ಚರ ವಹಿಸಬೇಕಂತೆ. ಇದು ಉತ್ತಮ ಲಕ್ಷಣವಲ್ಲ ಎಂಬುದು ಹಲವರ ಅಭಿಪ್ರಾಯ.

ಕನಸಿನಲ್ಲಿ ನೀವು ಲಕ್ಷೀ ದೇವಿಯನ್ನು ಕಂಡರೆ ನಿಮ್ಮ ಮೇಲೆ ದೇವರ ದಯೆ ಇದೆ ಎಂದರ್ಥ. ಇಂಥ ಸಂದರ್ಭದಲ್ಲಿ ಯಾವುದೇ ಹೊಸ ಕೆಲಸವನ್ನಾದರೂ ನಿರ್ಭೀತಿಯಿಂದ ಆರಂಭಿಸಬಹುದು. ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular