ಹಣ್ಣು – ತರಕಾರಿ ಸಿಪ್ಪೆ ಎಸೆಯುವ ಮುನ್ನ ತಿಳಿಯಿರಿ ಅದರಿಂದಾಗುವ ಹಲವು ಪ್ರಯೋಜನ

ತರಕಾರಿ ಅಥವಾ ಹಣ್ಣುಗಳ ಸಿಪ್ಪೆಗಳಿಂದ ಹಲವಾರು ಪ್ರಯೋಜನಗಳಿವೆ. ಇವುಗಳನ್ನು ಬಿಸಾಡುವ ಬದಲು ಅವುಗಳಿಂದ ಲಾಭಗಳನ್ನು ಪಡೆದುಕೊಳ್ಳಿ. ಯಾವ ಸಿಪ್ಪೆಯಲ್ಲಿ ಏನು ಲಾಭ ಎಂಬುದರ ವಿವರ ಇಲ್ಲಿದೆ.

ನಿಂಬೆ ಸಿಪ್ಪೆ

ಹಳದಿ ಬಣ್ಣದ ಈ ಸಿಪ್ಪೆಯಲ್ಲಿ ನಾರು, ವಿಟಮಿನ್‌ ಸಿ, ಬಿ6, ಕ್ಯಾಲ್ಷಿಯಂ, ಐರನ್‌ ಮತ್ತು ಮೆಗ್ನೀಷಿಯಂಗಳಿವೆ. ಇವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಿಂಬೆ ಸಿಪ್ಪೆಯ ರುಚಿ ನಾಲಿಗೆಯ ರುಚಿ ಹೆಚ್ಚುವಂತೆ ಮಾಡುತ್ತದೆ.

ಕಲ್ಲಂಗಡಿ ಸಿಪ್ಪೆ

ಇದರ ಹಸಿರು ಸಿಪ್ಪೆಯಲ್ಲಿರುವ ಸಿಟ್ರಲ್ಲೈನ್‌ ಎಂಬ ಅಮಿನೊ ಆ್ಯಸಿಡ್‌ ರಕ್ತದ ಪರಿಚಲನೆಯನ್ನು ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ನಾಯುಗಳ ದಣಿವನ್ನು ಕಡಿಮೆಗೊಳಿಸುತ್ತದೆ. ಕಲ್ಲಂಗಡಿ ಸಿಪ್ಪೆಯಲ್ಲಿ ವಿಟಮಿನ್‌ ಸಿ ಮತ್ತು ಬಿ6 ಕೂಡಾ ಇವೆ.

‘ಜೇನು’ ಸೇವಿಸುವುದರಿಂದ ಸಿಗಲಿದೆ ಇಷ್ಟೆಲ್ಲಾ ಪ್ರಯೋಜನ

ಕಿವಿ ಸಿಪ್ಪೆ

ಕಂದು ಬಣ್ಣದ ಈ ಸಿಪ್ಪೆ ನಿಂಬೆ ಸಿಪ್ಪೆಯಷ್ಟು ಒಳ್ಳೆಯದು. ವಿಟಮಿನ್‌ ಸಿ, ನಾರು ಹೆಚ್ಚಿರುವ ಈ ಸಿಪ್ಪೆ ಚರ್ಮದ ಆರೋಗ್ಯಕ್ಕೆ ಉತ್ತಮ.

ಈರುಳ್ಳಿ ಸಿಪ್ಪೆ

ಕೆಂಪು, ಹಳದಿ, ಬಿಳಿ ಈರುಳ್ಳಿಯ ಸಿಪ್ಪೆಯಲ್ಲಿ ಕ್ವೆರ್ಸಿಟಿನ್‌ ಎಂಬ ಫ್ಲೆವನಾಯ್ಡ್‌ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಉರಿಯನ್ನು ಕಡಿಮೆ ಮಾಡಿ ರಕ್ತದೊತ್ತಡ ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೂ ಈರುಳ್ಳಿ ಸಿಪ್ಪೆ ಬೆಸ್ಟ್‌.

ಬಾಳೆಹಣ್ಣು ಸಿಪ್ಪೆ

ಈ ಸಿಪ್ಪೆಯಲ್ಲಿ ಟ್ರೈಪ್ಟೊಫನ್‌ ಇದ್ದು, ಇದು ಸೆರೊಟನಿನ್‌ ಎಂಬ ಹ್ಯಾಪಿನೆಸ್‌ ಹಾರ್ಮೋನ್‌ ಉತ್ಪಾದನೆ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read