ಮನೆಯಂಗಳದ ಕೈತೋಟದಲ್ಲಿ ಹೂಗಿಡ ನೆಡುವ ಮುನ್ನ

ಮನೆಯಂಗಳದಲ್ಲಿ ಹೂಗಿಡ ನೆಟ್ಟು ಕೈತೋಟ ಮಾಡಿಕೊಳ್ಳಲು ಅವಕಾಶ ಇಲ್ಲದವರು ಮನೆಯ ಒಳಗೂ ಕೆಲವು ಬಗೆಯ ಗಿಡಗಳನ್ನು ನೆಟ್ಟು ಮನೆಯ ಸೌಂದರ್ಯವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು.

ಗಿಡಗಳನ್ನು ನೆಡಲು ವಸಂತ ಕಾಲ ಹೆಚ್ಚು ಸೂಕ್ತ. ಈ ಅವಧಿಯಲ್ಲಿ ನೀವು ಯಾವ ಗಿಡ ನೆಟ್ಟರೂ, ಕತ್ತರಿಸಿದರೂ ಹೊಸ ಚಿಗುರು ಒಡೆಯುತ್ತದೆ. ಕತ್ತರಿಸಿದ ತುಂಡಿನಿಂದಲೂ ಹೊಸ ಗಿಡ ಬೆಳೆಸಬಹುದು.

ಬೇಸಿಗೆ ಕಾಲದಲ್ಲಿ ಕೆಲವು ಗಿಡಗಳು ನೀರು ಹಾಕಿದರಷ್ಟೇ ಹೇರಳವಾಗಿ ಹೂ ಬಿಡುತ್ತವೆ. ಹಾಗಾಗಿ ಅಂಥ ಗಿಡಗಳನ್ನು ಮನೆಯೊಳಗೆ ನೆಟ್ಟು ನಿರಂತರ ನೀರೂಡಿಸಿ.

ಮಳೆಗಾಲದಲ್ಲಿ ಮನೆಯೊಳಗೆ ನೆಟ್ಟ ಗಿಡಗಳಿಗೂ ಕಡಿಮೆ ನೀರು ಸಾಕಾಗುತ್ತದೆ. ಆಗ ಗಿಡಗಳಿಗೆ ಸಾವಯವ ಕೀಟನಾಶಕ ಸಿಂಪಡಿಸಬೇಕು. ಹೆಚ್ಚುವರಿ ನೀರು ನಿಂತು ಸೊಳ್ಳೆಗಳ ತವರಾಗದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read