HomeBeautyಪುರುಷರು ಚಳಿಗಾಲದಲ್ಲಿ ತಮ್ಮ ತ್ವಚೆ ರಕ್ಷಿಸಲು ಈ ಕ್ರಮಗಳನ್ನು ಪಾಲಿಸಿ

ಪುರುಷರು ಚಳಿಗಾಲದಲ್ಲಿ ತಮ್ಮ ತ್ವಚೆ ರಕ್ಷಿಸಲು ಈ ಕ್ರಮಗಳನ್ನು ಪಾಲಿಸಿ

ಪುರುಷರು ಒರಟು ತ್ವಚೆಯನ್ನು ಹೊಂದಿರುತ್ತಾರೆ. ಹಾಗಾಗಿ ಅವರು ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಪುರುಷರು ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಾಗಾಗಿ ಈ ಮನೆಮದ್ದುಗಳನ್ನು ಬಳಸಿ.

*ರೋಸ್ ವಾಟರ್ : ಸೌತೆಕಾಯಿ ರಸದೊಂದಿಗೆ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಇದರಿಂದ ಎಣ್ಣೆಯಂಶ ಕಡಿಮೆಯಾಗುತ್ತದೆ.

*ತಾಜಾ ಪುದೀನಾ ಎಲೆಗಳ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ನೀರಿನಲ್ಲಿ ವಾಶ್ ಮಾಡಿ. ಇದು ಮೊಡವೆಗಳ ಸಮಸ್ಯೆಯನ್ನು ದೂರಮಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಕುದಿಸಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ಮುಖ ತೊಳೆಯಿರಿ. ಇದರಿಂದ ಮುಖದಲ್ಲಿರುವ ಬ್ಯಾಕ್ಟೀರಿಯಾಗಳು ನಿವಾರಣೆಯಾಗುತ್ತದೆ.

* ಮುಖಕ್ಕೆ ಶ್ರೀಗಂಧದ ಪೇಸ್ಟ್ ಮತ್ತು ರೋಸ್ ವಾಟರ್ ಮಿಕ್ಸ್ ಮಾಡಿ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿ.

*ಹಾಗೇ ಪ್ರತಿದಿನ 6ರಿಂದ 8 ಲೋಟ ನೀರು ಕುಡಿಯಿರಿ, ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಪ್ರತಿದಿನ ತಾಜಾ ಹಣ್ಣುಗಳು, ಸಲಾಡ್, ಮೊಳಕೆ ಕಾಳುಗಳು, ಧಾನ್ಯಗಳು ಮತ್ತು ಮೊಸರನ್ನು ಸೇವಿಸಿ.

For Latest News Updates, Join Our Whatsapp Community🚩
RELATED ARTICLES

Most Popular