HomeKarnatakaBIG NEWS : ಪ್ರತಿಭಟನೆ ವೇಳೆ ಎಚ್ಚರಿಕೆಯಿಂದಿರಿ : 'ಕೈ' ಕಾರ್ಯಕರ್ತರಿಗೆ 'CM ಸಿದ್ದರಾಮಯ್ಯ' ಸಲಹೆ..!

BIG NEWS : ಪ್ರತಿಭಟನೆ ವೇಳೆ ಎಚ್ಚರಿಕೆಯಿಂದಿರಿ : ‘ಕೈ’ ಕಾರ್ಯಕರ್ತರಿಗೆ ‘CM ಸಿದ್ದರಾಮಯ್ಯ’ ಸಲಹೆ..!

ಬೆಂಗಳೂರು : ಪ್ರತಿಭಟನೆ ವೇಳೆ ಎಚ್ಚರಿಕೆಯಿಂದಿರಿ ಎಂದು ಕೈ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರ ಕಾನೂನು ಬಾಹಿರ ನಿರ್ಣಯ ಖಂಡಿಸಿ ಬಾಗಲಕೋಟೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ದ್ಯಾಮಪ್ಪ ಎಂಬ ನನ್ನ ಅಭಿಮಾನಿಯೊಬ್ಬರು ಗಾಯಗೊಂಡ ವಿಚಾರ ಈಗಷ್ಟೆ ತಿಳಿಯಿತು. ದೇಶದ ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ನನ್ನ ಮತ್ತು ನಮ್ಮ ಪಕ್ಷದ ಪರವಾಗಿ ಇಂದು ಹೋರಾಟ ನಡೆಸುತ್ತಿರುವ ನನ್ನೆಲ್ಲ ಆತ್ಮೀಯ ಬಂಧುಗಳು ಪ್ರತಿಭಟನೆಯ ವೇಳೆ ದಯವಿಟ್ಟು ಎಚ್ಚರಿಕೆಯಿಂದಿರಿ. ನಿಮ್ಮ ಕಾಳಜಿ, ಆಕ್ರೋಶವನ್ನು ನಾನು ಅರ್ಥೈಸಿಕೊಳ್ಳಬಲ್ಲೆ ಆದರೆ ನನಗೆ ನಿಮ್ಮೆಲ್ಲರ ಆರೋಗ್ಯ, ಜೀವವೂ ಮುಖ್ಯ. ನಿಮ್ಮ ಪ್ರೀತಿಗೆ ನಾನು ಸದಾ ಋಣಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular