HomeCrimeALERT : ‘ಆನ್ ಲೈನ್’ ನಲ್ಲಿ ಲೋನ್ ಪಡೆಯುವ ಮುನ್ನ ಹುಷಾರ್ : ಟಾರ್ಚರ್ ತಾಳಲಾರದೇ...

ALERT : ‘ಆನ್ ಲೈನ್’ ನಲ್ಲಿ ಲೋನ್ ಪಡೆಯುವ ಮುನ್ನ ಹುಷಾರ್ : ಟಾರ್ಚರ್ ತಾಳಲಾರದೇ ಯುವ ‘ಕಬಡ್ಡಿ ಆಟಗಾರ’ ಆತ್ಮಹತ್ಯೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ ಯುವ ಕಬಡ್ಡಿ ಆಟಗಾರ ಸ್ವರಾಜ್(24) ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಏನಿದು ಘಟನೆ..?

ಸ್ವರಾಜ್ ತನ್ನ ವಾಟ್ಸಾಪ್ನಲ್ಲಿ ಅಕ್ಕನ ಮಗಳ ಫೋಟೋ ಹಾಕಿದ್ದನು. ಈ ಫೋಟೋವನ್ನು ಲೋನ್ ಆ್ಯಪ್ನವರು ಎಡಿಟ್ ಮಾಡಿ ಮಾರಾಟಕ್ಕಿದೆ ಎಂದು ಸ್ವರಾಜ್ ಸ್ನೇಹಿತರು, ಹಾಗೂ ಆತನ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಲಾಗಿತ್ತು.ಈ ಟಾರ್ಚರ್ ತಾಳಲಾರದೇ ಆಗಸ್ಟ್ 30 ರಂದು 30 ಸಾವಿರ ರೂಪಾಯಿ ಕಟ್ಟಿದ್ದನು. ಆದರೂ ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಅಲ್ಲದೇ ಆ.31 ರೊಳಗೆ ಹಣ ನೀಡುವಂತೆ ಡೆಡ್ ಲೈನ್ ನೀಡಲಾಗಿತ್ತು.ಈ ಟಾರ್ಚರ್ ತಾಳಲಾರದೇ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಜಿರೆಯ ಸಾನಿಧ್ಯ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಸ್ವರಾಜ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಜನಪ್ರಿಯ ಆಟಗಾರನಾಗಿದ್ದನು. ಲೋನ್ ಕಿರುಕುಳಕ್ಕೆ ಮನನೊಂದು ಬಾತ್ ರೂಮ್ ನಲ್ಲಿಯೇ ಸ್ವರಾಜ್ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಆನ್ ಲೈನ್ ಬಹಳ ಸುಲಭವಾಗಿ ಲೋನ್ ಸಿಗುತ್ತದೆ ಎಂದು ಸಾಲ ಪಡೆಯುವ ಮುನ್ನ ಪ್ರತಿಯೊಬ್ಬರೂ ಎಚ್ಚರ ವಹಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular