‘ಎಣ್ಣೆ ಪಾರ್ಟಿಲಿ’ ಗೆಳೆಯರನ್ನು ಕಾಲೆಳೆಯುವ ಮುನ್ನ ಹುಷಾರ್…ಈ ಸುದ್ದಿ ಓದಿ..!

‘ಎಣ್ಣೆ ಪಾರ್ಟಿಲಿ’ ಗೆಳೆಯರನ್ನು ಕಾಲೆಳೆಯುವ ಮುನ್ನ ಹುಷಾರ್…ಯಾಕಂತೀರಾ..ಈ ಸುದ್ದಿ ಓದಿ.
ಹೌದು, ಸ್ನೇಹಿತರೆಲ್ಲಾ ಸೇರಿ ಎಣ್ಣೆ ಪಾರ್ಟಿ ಮಾಡುವಾಗ ಅದರಲ್ಲೊಬ್ಬ ಸ್ನೇಹಿತ ಎಲ್ಲರನ್ನೂ ಕಾಲೆಳೆಯಲು ಹೋಗಿ ಕೊಲೆಯಾಗಿದ್ದಾನೆ.

ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದ ಒಂದು ಕೊಲೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.ಕೊಲೆಯಾದ ವ್ಯಕ್ತಿ ಜಾರ್ಖಂಡ್ ಮೂಲದ ಲಕ್ಷ್ಮಣ್ ಮಾಂಝಿ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಬೈರತಿಯಲ್ಲಿ ಬೈರತಿಯಲ್ಲಿ ಗೆಳೆಯರೊಂದಿಗೆ ವಾಸವಿದ್ದನು. ನವೆಂಬರ್ 16ರಂದು ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ಆಗ ಅವರ ನಡುವೆ ಮಾತಿನ ಜಗಳ ನಡೆದಿತ್ತು.

ಸುಖಾ ಸುಮ್ಮನೆ . ಲಕ್ಷ್ಮಣ್ ಮಾಂಝಿ ಎಲ್ಲರ ಕಾಲೆಳೆದು ಮಾತನಾಡುತ್ತಿದ್ದನು. ಆದರೆ ಅಂದು ಮಾತ್ರ ಆತನ ಅದೃಷ್ಟ ಚೆನ್ನಾಗಿರಲಿಲ್ಲ. ಕುಡಿತ ಮತ್ತಿನಲ್ಲಿ ಕಾಲೆಳೆಯಲು ಬಂದ ಗೆಳೆಯನನ್ನು ಕೆಲವು ಸಹಿಸಿಕೊಂಡರು. ಮಾತಿನಿಂದ ಆತನನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಆದರೆ ಅವರು ಎಣ್ಣೆ ಹೊಡೆದು ಟೈಟ್ ಆಗುತ್ತಿದ್ದಂತೆ ಹೊರಗೆ ಕರೆದುಕೊಂಡು ಬಂದವರೇ ಖಾಲಿ ಜಮೀನಿನಲ್ಲಿ ನೆಲಕ್ಕೆ ಉರುಳಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಕೊಂದಿದ್ದಾರೆ. ಈ ಸಂಬಂಧ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read