HomeLatest NewsBBK 12 Finale: ಬರೋಬ್ಬರಿ 37 ಕೋಟಿ ವೋಟ್ಸ್ ಪಡೆದ ಸ್ಪರ್ಧಿ ಮೊದಲ ಸ್ಥಾನದಲ್ಲಿ; ವಿಷಯ...

BBK 12 Finale: ಬರೋಬ್ಬರಿ 37 ಕೋಟಿ ವೋಟ್ಸ್ ಪಡೆದ ಸ್ಪರ್ಧಿ ಮೊದಲ ಸ್ಥಾನದಲ್ಲಿ; ವಿಷಯ ತಿಳಿದು ಬೆಚ್ಚಿಬಿದ್ದ ಮನೆಮಂದಿ

ನಾಳೆ ( ಜನವರಿ 18 ) ಭಾನುವಾರ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಮೂಲಕ ದೀರ್ಘ ಅವಧಿಯ ಬಿಗ್‌ಬಾಸ್‌ನಲ್ಲಿ ಗೆದ್ದವರಾರು, ರನ್ನರ್ ಅಪ್ ಆದವರಾರು ಎಂಬ ವಿಷಯ ಹೊರಬೀಳಲಿದೆ.

ಈ ಬಾರಿಯ ಫಿನಾಲೆ ವಾರಕ್ಕೆ ಆರು ಸ್ಪರ್ಧಿಗಳು ಕಾಲಿಟ್ಟಿದ್ದು, ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮ್ಯೂಟಂರ್ ರಘು, ಕಾವ್ಯ ಶೈವ ಹಾಗೂ ಧನುಷ್ ಫೈನಲಿಸ್ಟ್‌ಗಳಾಗಿದ್ದಾರೆ. ಈ ಆರು ಮಂದಿಯಲ್ಲಿ ಓರ್ವರು ವಿನ್ನರ್ ಪಟ್ಟವನ್ನು ಗಿಟ್ಟಿಸಿಕೊಂಡರೆ, ಓರ್ವರು ರನ್ನರ್ ಅಪ್ ಆಗಲಿದ್ದಾರೆ.

ಹೀಗೆ ಭಾರೀ ಕುತೂಹಲ ಹುಟ್ಟುಹಾಕಿರುವ ಈ ಬಾರಿಯ ಫಿನಾಲೆಯಲ್ಲಿ ಇಬ್ಬರ ನಡುವೆ ನೇರಾನೇರ ಪೈಪೋಟಿ ಇದೆ. ಹೌದು, ಆರು ಮಂದಿ ರೇಸ್‌ನಲ್ಲಿದ್ದರೂ ಜಿದ್ದಾಜಿದ್ದಿ ಮಾತ್ರ ನಡೆಯುತ್ತಿರುವುದು ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ನಡುವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರಂಭದಿಂದಲೂ ಇಬ್ಬರ ನಡುವೆ ಪೈಪೋಟಿ ಇದ್ದು, ಈ ಬಾರಿ ಕಪ್ ಗೆದ್ದರೆ ಗಿಲ್ಲಿ ಅಥವಾ ಅಶ್ವಿನಿ ಎಂದು ಜನ ಮಾತನಾಡಿಕೊಳ್ಳುವ ಮಟ್ಟಕ್ಕೆ ಬಂದು ತಲುಪಿದೆ. ಅಷ್ಟರಮಟ್ಟಿಗೆ ಇಬ್ಬರ ನಡುವಿನ ಯುದ್ಧವಾಗಿ ಪರಿಣಿಮಿಸಿರುವ ಈ ಫಿನಾಲೆಯಲ್ಲಿ ಯಾರು ಟ್ರೋಫಿ ಎತ್ತಿಹಿಡಿಯಲಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ.

ನಾಳೆ ವಿನ್ನರ್ ಘೋಷಣೆಯಾಗಲಿದ್ದು, ಇಂದಿನ ವಾರದ ಕಥೆಯ ಪ್ರೋಮೊದಲ್ಲಿ ಕಿಚ್ಚ ಸುದೀಪ್ ಈ ಬಾರಿ ನಡೆದಿರುವ ಮತದಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಸೀಸನ್‌ 11ರಲ್ಲಿ ವಿನ್ನರ್ ಆಗಿದ್ದ ಸ್ಪರ್ಧಿ ಪಡೆದುಕೊಂಡಿದ್ದ ಮತದ ಸಂಖ್ಯೆ ಹಾಗೂ ಈ ಬಾರಿ ಅತಿಹೆಚ್ಚು ಮತ ಪಡೆದು ಅಗ್ರಸ್ಥಾನದಲ್ಲಿರುವ ಸ್ಪರ್ಧಿ ಗಳಿಸಿರುವ ಮತಗಳ ಬಗ್ಗೆ ಮಾಹಿತಿ ಹಂಚಿಕೊಂಡ ಕಿಚ್ಚನ ಮಾತುಗಳನ್ನು ಕಂಡು ಮನೆ ಮಂದಿ ಬೆಚ್ಚಿಬಿದ್ದಿದ್ದಾರೆ, ಬಾಯಿಯ ಮೇಲೆ ಕೈ ಇಟ್ಟುಕೊಂಡಿದ್ದಾರೆ.

ಕಳೆದ ಬಾರಿ ವಿನ್ನರ್ 5.23 ಕೋಟಿ ವೋಟ್‌ಗಳನ್ನು ಪಡೆದಿದ್ದರು ಎಂದು ಮಾಹಿತಿ ಹಂಚಿಕೊಂಡ ಕಿಚ್ಚ ಈ ಬಾರಿ ಜನವರಿ 16ರ ರಾತ್ರಿ 12 ಗಂಟೆಯವರೆಗೆ ಮೊದಲ ಸ್ಥಾನದಲ್ಲಿರುವ ಸ್ಪರ್ಧಿ 37 ಕೋಟಿಗೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಮೊದಲ ಸ್ಪರ್ಧಿಗೂ ಎರಡನೇ ಸ್ಪರ್ಧಿಗೂ ವೋಟ್‌ಗಳ ಅಂತರ ಹೆಚ್ಚೇನಿಲ್ಲ ಎಂದು ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ಇನ್ನು ಇಂದೂ ಸಹ ವೋಟಿಂಗ್ ನಡೆದಿದ್ದು, ಯಾವ ಸ್ಪರ್ಧಿ ಕೊನೆಯ ಹಂತಕ್ಕೆ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂಬ ಕುತೂಹಲ ಕೆರಳಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular