ವಕೀಲನಿಗೆ ಯುವತಿಯರಿಂದ ಧರ್ಮದೇಟು ; ವಿಡಿಯೊ ವೈರಲ್ | Watch

ಉತ್ತರ ಪ್ರದೇಶದ ಬಸ್ತಿ ಸಿವಿಲ್ ಕೋರ್ಟ್‌ನ ಗೇಟ್ ನಂಬರ್ 3ರ ಬಳಿ ವಕೀಲರೊಬ್ಬರ ಮೇಲೆ ಇಬ್ಬರು ಯುವತಿಯರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ಹರಡಿದೆ.

ವರದಿಗಳ ಪ್ರಕಾರ, ವಕೀಲರೊಬ್ಬರು ಮೊಬೈಲ್ ಫೋನಿನಲ್ಲಿ ಯುವತಿಯೊಬ್ಬರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಿಟ್ಟಿಗೆದ್ದ ಆ ಯುವತಿ ನೇರವಾಗಿ ಕೋರ್ಟ್ ಪ್ರವೇಶ ದ್ವಾರದಲ್ಲಿ ವಕೀಲನನ್ನು ಎದುರಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ತಕ್ಷಣವೇ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಅಷ್ಟೇ ಅಲ್ಲದೆ, ಮತ್ತೊಬ್ಬ ಯುವತಿ ಕೂಡಾ ಸೇರಿಕೊಂಡು ವಕೀಲನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಇತರ ವಕೀಲರು ಮಧ್ಯಪ್ರವೇಶಿಸಿ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದರೂ, ಯುವತಿಯರು ವಕೀಲನಿಗೆ ಹೊಡೆಯುವುದನ್ನು ನಿಲ್ಲಿಸಲಿಲ್ಲ ಎನ್ನಲಾಗಿದೆ. ಗಲಾಟೆಯ ಸಂದರ್ಭದಲ್ಲಿ ಯುವತಿಯೊಬ್ಬರು ಅಲ್ಲಿದ್ದ ಇತರ ವ್ಯಕ್ತಿಗಳನ್ನು ತಳ್ಳಾಡಿದ್ದಾರೆ.

ಹಲ್ಲೆಗೊಳಗಾದ ವಕೀಲರು ಈ ಕುರಿತು ಬಾರ್ ಅಸೋಸಿಯೇಷನ್‌ಗೆ ದೂರು ನೀಡಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿ ಯುವತಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಸ್ತಿ ಪೊಲೀಸರು ತಿಳಿಸಿದ್ದಾರೆ. ಕೋರ್ಟ್ ಆವರಣದಂತಹ ಸಾರ್ವಜನಿಕ ಸ್ಥಳದಲ್ಲಿ ವಕೀಲರೊಬ್ಬರ ಮೇಲೆ ನಡೆದ ಈ ಹಲ್ಲೆ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read